'ಎಲ್ಲ ಕಳ್ಳರು ಸೇರಿ ಸರಕಾರ ರಚಿಸಿದ್ದಾರೆ'

Update: 2018-05-23 14:29 GMT

ಬೆಳಗಾವಿ, ಮೇ 23: ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ ಆಗುತ್ತಿದ್ದು, ಈ ಮ್ಯಾರೇಜ್ ಅನಧಿಕೃತವಾಗಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದು ತಂದೆ, ತಾಯಿ ಒಪ್ಪಿಗೆ ಇಲ್ಲದ ಲವ್ ಮ್ಯಾರೇಜ್ ಎಂದು ವ್ಯಂಗ್ಯವಾಡಿರುವ ಅವರು ಕರ್ನಾಟಕದ ಜನತೆಗೆ ಈ ಮೈತ್ರಿ ಸರಕಾರ ಒಪ್ಪಿಗೆ ಇಲ್ಲ. ಕುಮಾರಸ್ವಾಮಿ ವಚನ ಭ್ರಷ್ಟ, ಸಿದ್ದರಾಮಯ್ಯ ಮೋಸಗಾರ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅಂತಹ ದೊಡ್ಡ ಕಳ್ಳ ದೇಶದಲ್ಲಿ ಯಾರೂ ಇಲ್ಲ. ಇವತ್ತು ಎಲ್ಲಾ ಕಳ್ಳರು ಸೇರಿ ಬಿಜೆಪಿ ದೂರವಿಟ್ಟು ಸರಕಾರ ರಚನೆ ಮಾಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಲವ್ ಮ್ಯಾರೇಜ್ 6 ತಿಂಗಳಲ್ಲಿ ಡೈವೋರ್ಸ್ ಆಗುತ್ತೆ. ಮತ್ತೆ ರಾಜ್ಯದಲ್ಲಿ ಬಿಎಸ್‌ವೈ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಸಂಜಯ್ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ಸಂಜಯ ಪಾಟೀಲ್ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಈ (ಕರ್ನಾಟಕ ವಿಧಾನಸಭೆ) ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ನಡೆಯುತ್ತಿಲ್ಲ. ಇದು ಹಿಂದೂ-ಮುಸ್ಲಿಮರ ನಡುವಿನ ಚುನಾವಣೆ, ರಾಮ ಮಂದಿರ -ಬಾಬ್ರಿ ಮಸೀದಿಯ ಮಧ್ಯದ ಚುನಾವಣೆ, ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೇ ಅವರು ಬೆಳಗಾವಿ ಗ್ರಾಮಾಂತರ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸ್ಪರ್ಧಿಸಿ  50,000 ಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News