ಗದಗ: ಆಟೋದಲ್ಲಿಯೇ ಹೆರಿಗೆ; ತಾಯಿ, ಮಗು ಕ್ಷೇಮ

Update: 2018-05-23 16:33 GMT

ಗದಗ,ಮೇ.23: ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಆಟೋದಲ್ಲಿ ಹೆರಿಗೆಯಾದ ಘಟನೆ ಲಕ್ಕುಂಡಿ ಗ್ರಾಮದ ಹೊರ ವಲಯದಲ್ಲಿ ಇತ್ತೀಚಿಗೆ ನಡೆದಿದೆ.                        

ಜಂತ್ಲಿ-ಶಿರೂರು ಗ್ರಾಮದ ಸವಿತಾ ತಂದೆ ವಾಸಪ್ಪ ಬಡಿಗೇರ ಎಂಬ ಮಹಿಳೆ ಆಟೋದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿದ್ದಾರೆ.

ತುಂಬು ಗರ್ಭಿಣಿಯಾಗಿದ್ದ ಸವಿತಾಗೆ ಕಳೆದ ರಾತ್ರಿವರೆಗೂ ಯಾವುದೇ ನೋವು ಕಾಣಿಸಿಕೊಂಡಿರಲಿಲ್ಲ. ಬೆಳಗ್ಗೆ ಸ್ವಲ್ಪ‌ ನೋವು ಕಾಣಿಸಿಕೊಂಡಾಗ ಆಕೆ ಅದನ್ನು ನಿರ್ಲಕ್ಷಿಸಿದ್ದಳು. ಬಳಿಕ ನೋವು ತೀವ್ರವಾದಾಗ ಕೂಡಲೇ ಆಟೋ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಜಂತ್ಲಿ-ಶಿರೂರು ಹಾಗೂ ಲಕ್ಕುಂಡಿ ಗ್ರಾಮದ ಮಧ್ಯದಲ್ಲಿ ಸವಿತಾಗೆ ಆಟೋದಲ್ಲಿಯೇ ಹೆರಿಗೆಯಾಗಿದೆ ಎನ್ನಲಾಗಿದೆ. 

ನಂತರ ತಡಮಾಡದೇ ಲಕ್ಕುಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರು ತಾಯಿ-ಮಗುವಿಗೆ ಚಿಕಿತ್ಸೆ ನೀಡಿದರು. ಆಶಾ ಕಾರ್ಯಕರ್ತೆ ಲಲಿತಮ್ಮ ಸೇರಿದಂತೆ ಸವಿತಾ ಸಹೋದರಿ ಜ್ಯೋತಿ ಎಂ.ಬಡಿಗೇರ ಈ ಜೊತೆಗಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News