ಮೈಸೂರು: ವ್ಯಕ್ತಿಯ ಬರ್ಬರ ಹತ್ಯೆ
Update: 2018-05-23 22:18 IST
ಮೈಸೂರು,ಮೇ.23: ವ್ಯಕ್ತಿಯೋರ್ವನನ ಗುದದ್ವಾರ ಮತ್ತು ಮಾರ್ಮಾಂಗಕ್ಕೆ ಆಯುಧದಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು-ಹುಣಸೂರು ರಸ್ತೆಯಲ್ಲಿ ನಡೆದಿದೆ.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ಕಿರ್ಲೋಸ್ಕರ್ ಫ್ಯಾಕ್ಟರಿಯ ಕಾಂಪೌಂಡ್ ಒಳಗೆ ಅಪರಿಚಿತ ವ್ಯಕ್ತಿಯೋರ್ವ ಅಂಗಾತ ಮಲಗಿರುವುದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವ್ಯಕ್ತಿಯನ್ನು ಪರಿಶೀಲನೆ ಮಾಡಿದಾಗ, ಆತನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ಎಸೆದು ಹೋಗಿರುವುದು ಗೊತ್ತಾಗಿದೆ.
ಘಟನೆಗೆ ಕಾರಣ ನಿಖರವಾಗಿ ತಿಳಿದು ಬಂದಿಲ್ಲ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.