ಮೈಸೂರು: ಪ್ರೀಯತಮನ ಬೆದರಿಕೆಗೆ ಹೆದರಿ ಯುವತಿ ಆತ್ಮಹತ್ಯೆ; ಆರೋಪ
Update: 2018-05-24 21:41 IST
ಮೈಸೂರು,ಮೇ.21: ಪ್ರೀತಿಸಿದ ಹುಡುಗನ ಬೆದರಿಕೆಗೆ ಬೇಸತ್ತ ಯುವತಿ ನೇಣಿಗೆ ಶರಣಾಗಿದ್ದಾಳೆ ಎನ್ನಲಾದ ಘಟನೆ ಮೈಸೂರು ಹೊರವಲಯದ ಬೆಳವಾಡಿಯಲ್ಲಿ ನಡೆದಿದೆ.
ಮೃತ ಯುವತಿ ಧನ್ಯಾ (19)ಎಂದು ಗುರುತಿಸಲಾಗಿದ್ದು, ಈಕೆ ಮೇಟಗಳ್ಳಿ ನಿವಾಸಿ ಬೀನು ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಪ್ರೀತಿಸುತ್ತಿದ್ದ ಯುವಕನನ್ನು ಮನೆಗೆ ಕರೆದುಕೊಂಡು ಬರುವಂತೆ ಧನ್ಯಾ ಪೋಷಕರು ಒತ್ತಾಯ ಮಾಡಿತ್ತಿದ್ದು, ಇದರಿಂದಾಗಿ ಮದುವೆ ಮಾತುಕತೆಗೆ ಮನೆಗೆ ಬರುವಂತೆ ಬೀನು ಗೆ ಧನ್ಯಾ ಆಗಾಗ ಒತ್ತಾಯ ಮಾಡುತ್ತಿದ್ದಳು. ಆದರೆ ಮನೆಗೆ ಬಾರಲು ಒಪ್ಪದಿದ್ದಾಗ ಪ್ರಿಯಕರನ ಜೊತೆ ಆಕೆ ಜಗಳವಾಡಿದ್ದಳು. ಇದರಿಂದ ಕೋಪಗೊಂಡ ಬೀನು, ಧನ್ಯಾಳ ತಂದೆ ನಡೆಸುತ್ತಿದ್ದ ಅಂಗಡಿ ಬಳಿ ಬಂದು ಧನ್ಯಾಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಧನ್ಯಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.