ಹುಳಿಯಾರು: ಮೈಮೇಲೆ ಲಾರಿ ಹರಿದು ದ್ವಿಚಕ್ರ ವಾಹನ ಸವಾರ ಮೃತ್ಯು
Update: 2018-05-24 22:27 IST
ಹುಳಿಯಾರು,ಮೇ.24; ಮೈ ಮೇಲೆ ಲಾರಿ ಹರಿದು ದ್ವಿಚಕ್ರ ಸವಾರ ಮೃತಪಟ್ಟ ಘಟನೆ ಹುಳಿಯಾರಿನ ಬೆಸ್ಕಾಂ ಕಚೇರಿ ಎದುರು ಗುರುವಾರ ಸಂಜೆ 6 ರ ಸುಮಾರಿಗೆ ನಡೆದಿದೆ.
ಹುಳಿಯಾರು ವಾಸಿ ಲಕ್ಷ್ಮಣ(60) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಇವರು ತಮ್ಮ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಬಂಕ್ ಸರ್ಕಲ್ ನಿಂದ ಹುಳಿಯಾರು ಬಸ್ ನಿಲ್ದಾಣಕ್ಕೆ ತೆರಳುವಾಗ ಬೆಸ್ಕಾಂ ಕಚೇರಿ ಮುಂಭಾಗದ ರಸ್ತೆಯ ಹಂಪ್ ಹತ್ತಿಸುವಾಗ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಇವರ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹುಳಿಯಾರು ಪೊಲೀಸರು ಟ್ಯಾಂಕರ್ ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.