ಹನೂರು: ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮ
Update: 2018-05-25 17:30 IST
ಹನೂರು,ಮೇ 25 : ಪರಿಷ್ಕೃತಗೂಂಡಿರುವ 1 ರಿಂದ 10 ನೇ ತರಗತಿವರೆಗೆ ಪಠ್ಯ ಪುಸ್ತಗಳನ್ನು ಸಮರೋಪಾಧಿಯಲ್ಲಿ ಮುದ್ರಿಸಿ ಶೈಕ್ಷಣಿಕ ವರ್ಷದಲ್ಲಿ ಆರಂಭದಲ್ಲೇ ಮಕ್ಕಳಿಗೆ ವಿತರಿಸಲು ಸರ್ಕಾರ ತಿರ್ಮಾನಿಸಿದೆ ಎಂದು ಬಿಇಒ ಟಿ.ಆರ್ ಸ್ವಾಮಿ ತಿಳಿಸಿದರು.
ಪಟ್ಟಣ ಜಿ.ವಿ ಗೌಡ ಪ್ರೌಡಶಾಲೆಯಲ್ಲಿ ಕ್ಷೇತ್ರದ ಶಾಲೆಗಳಿಗೆ ಪಠ್ಯ ಪುಸ್ತಕ ವಿತರಣೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು ಸರ್ಕಾರವು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದ್ದು ಅದರಂತೆ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಹನೂರು ಶೈಕ್ಷಣಿಕ ವಲಯದ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಂದರ್ಭದಲ್ಲಿ ಬಿಆರ್ ಸಿ ಕ್ಯಾತ , ಬಿಆರ್ ಪಿ ವೆಂಕಟರಾಜು , ಸಿಆರ್ ಪಿ ವೃಂಧ ಹಾಗೂ ಶಿಕ್ಷಕರು ಹಾಜರಿದ್ದರು