×
Ad

ದತ್ತ ಸೋಲಿನಿಂದ ಕಾರ್ಯಕರ್ತರಲ್ಲಿ ನಿರಾಶೆ ಬೇಡ: ನೀಲಕಂಠಪ್ಪ

Update: 2018-05-25 18:14 IST

ಕಡೂರು, ಮೇ 25:  ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸೋಲಲು ಕಾರಣಗಳು ಹಲವಾರಿವೆ. ಸೋಲಿನಿಂದ ಜೆಡಿಎಸ್ ಕಾರ್ಯಕರ್ತರು ನಿರಾಶರಾಗುವುದು ಬೇಡ ಎಂದು ತಾಲ್ಲೂಕು ಜೆಡಿಎಸ್ ಉಪಾದ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರಾಗಿದ್ದ ವೈ.ಎಸ್.ವಿ.ದತ್ತ ಅವರು ಸೋಲನುಭವಿಸಿದ್ದು ನಿಜಕ್ಕೂ ದುರದೃಷ್ಟಕರ. ಸಚಿವರಾಗುವ ಆವಕಾಶವೊಂದು ತಪ್ಪಿಹೋಗಿದ್ದು ಆದರೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರ ಮಾನಸ ಪುತ್ರನೆಂದೇ ಖ್ಯಾತಿ ಪಡೆದಿರುವ ವೈ.ಎಸ್.ವಿ. ದತ್ತ ಅವರಿಗೆ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ವಿಧಾನಪರಿಷತ್ ಸ್ಥಾನ ಸಿಗುವ ಲಕ್ಷಣಗಳು ಬಹುತೇಕ ಖಾತರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕ್ಷೇತ್ರದ ಕಡೂರಿನ ಅಭಿವೃದ್ಧಿಯ ಕುರಿತು ಹಲವು ಕನಸುಗಳನ್ನೊತ್ತಿರುವ ದತ್ತ ಅವರಿಗೆ ಅಭಿವೃದ್ದಿಯೇ ಅವರ ಗುರಿಯಾಗಿದ್ದು. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರು ಆಸಕ್ತಿ ಕಳೆದಕೊಳ್ಳದೆ ಜೆಡಿಎಸ್ ಪಕ್ಷದ ದತ್ತ ಅವರ ನಾಯಕತ್ವದಲ್ಲೇ ಪಕ್ಷವನ್ನು ತಾಲ್ಲೂಕಿನಲ್ಲಿ ತಳಮಟ್ಟದಿಂದ ಸಂಘಟಿಸಲು ಕಾರ್ಯಕರ್ತರು ಉತ್ಸಾಹದಿಂದ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News