ನಾಳೆ ಸಿಬಿಎಸ್‌ಇ ಪಿಯು ಫಲಿತಾಂಶ
Update: 2018-05-25 21:53 IST
ಬೆಂಗಳೂರು, ಮೇ 25: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 12ನೆ ತರಗತಿಯ ಪರೀಕ್ಷಾ ಫಲಿತಾಂಶವನ್ನು ಶನಿವಾರ(ಮೇ 26) ಪ್ರಕಟಿಸಲಿದೆ.
2017-18ನೆ ಸಾಲಿನ ಸಿಬಿಎಸ್‌ಇ 12ನೆ ತರಗತಿ ಫಲಿತಾಂಶ ಶನಿವಾರ ಪ್ರಕಟವಾಗಲಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ವಿಭಾಗದ ಕಾರ್ಯದರ್ಶಿ ಅನಿಲ್ ಸ್ವರೂಪ್ ಅವರು ಟ್ವೀಟ್ ಮಾಡಿದ್ದಾರೆ.
ಸಿಬಿಎಸ್‌ಇ 12ನೆ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮವಾದ ಸಾಧನೆ ತೋರಿದ್ದಾರೆ. ಆದಾಗ್ಯೂ, ಅವರು ಫಲಿತಾಂಶವನ್ನು ಸಮಚಿತ್ತದಿಂದ ಸ್ವೀಕರಿಸಿಬೇಕು. ಈ ಪರೀಕ್ಷೆಗಳು ಜಗತ್ತಿನ ಕೊನೆಯೇನೂ ಅಲ್ಲ. ನೀವು ಚೆನ್ನಾಗಿ ಪರೀಕ್ಷೆ ಬರೆದಿದ್ದಲ್ಲಿ ವಿಶ್ವಾಸದಿಂದಿರಿ. ಯಾವುದೇ ಬಗೆಯ ವೈಫಲ್ಯವು ಭವಿಷ್ಯದಲ್ಲಿ ನೀವು ಯಶಸ್ವಿಯಾಗುವುದನ್ನು ಇನ್ನಷ್ಟು ದೃಢೀಕರಿಸಬೇಕೆಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.