×
Ad

ಮೇ.28 ರಿಂದ ಹೇಮಾವತಿ ಎಡದಂಡೆ ಕಾಲುವೆ ಕಾಮಗಾರಿ ಅವ್ಯವಹಾರದ ಬಗ್ಗೆ ತನಿಖೆ: ವಕೀಲ ಕೆ.ಆರ್. ಸುನೀಲ್

Update: 2018-05-26 18:03 IST

ಹಾಸನ,ಮೇ.26: ಮೇ.28 ರಿಂದ 7 ದಿನಗಳ ಕಾಲ ಹೇಮಾವತಿ ಎಡದಂಡೆ ಕಾಲುವೆ ನಿರ್ಮಾಣದ ಕಾಮಗಾರಿಯ ಅವ್ಯವಹಾರದ ಬಗ್ಗೆ ತನಿಖೆಯನ್ನು ವಿಚಕ್ಷಣಾ ದಳ ಜಲಸಂಪನ್ಮೂಲ ಇಲಾಖೆ ನಡೆಸಲಿದೆ ಎಂದು ವಕೀಲ ಕೆ.ಆರ್. ಸುನೀಲ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಹೇಮಾವತಿ ಎಡದಂಡೆ ಕಾಲುವೆಯ 0 ಕಿ.ಮೀ ನಿಂದ 72 ಕೀ.ಮೀ ಉದ್ದದ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರದ ಬಗ್ಗೆ ಮೇ.28 ರಿಂದ ಜೂ.2ರ ವರೆಗೂ ಸತತವಾಗಿ 7 ದಿನಗಳ ಕಾಲ ತನಿಖೆಯನ್ನು ಕೈಗೆತ್ತಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮತ್ತು ಇತರರು ಉಚ್ಛ ನ್ಯಾಯಾಲಯದಲ್ಲಿ ಇಲ್ಲಿನ ಕಾಮಗಾರಿ ಅವ್ಯವಹಾರಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಕಾಲುವೆ ಮರು ನಿರ್ಮಾಣದ 670 ಕೋಟಿ ರೂ ವೆಚ್ಚದ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ರಿಟ್ ಅರ್ಜಿಯಲ್ಲಿ ಮಾಡಿರುವ ಆರೋಪವನ್ನು ನೇರವಾಗಿ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಹೊಸ ಅರ್ಜಿಯನ್ನು ನೀಡಲಾಯಿತು ಎಂದರು.

ಅರ್ಜಿಯ ಮೇಲೆ ಮುಖ್ಯ ಕಾರ್ಯದರ್ಶಿಗಳು 3 ತಿಂಗಳ ಒಳಗಾಗಿ ಈಗಿನ ಕಾಮಗಾರಿಯ ತಪ್ಪಿಸಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಆದೇಶ ಮಾಡಲಾಯಿತು ಎಂದು ಹೇಳಿದರು. ಸರಕಾರದ ವತಿಯಿಂದ ತನಿಖೆಗಾಗಿ ಪೊಲಿಸ್ ಮಹಾನಿರೀಕ್ಷಕರು, ವಿಷಕ್ಷಣಾ ಧಳ, ಜಲಸಂಪನ್ಮೂಲ ಇಲಾಖೆಯವರಿಗೆ ಆದೇಶ ಮಾಡಲಾಗಿದೆ. ಕಾಮಗಾರಿಯ ಅವ್ಯವಹಾರದ ತನಿಖೆಯ ಬಗ್ಗೆ  ಮೇ.28 ರಿಂದ ಜೂ.2ರ ವರೆಗೂ ವಿಚಕ್ಷಣ ದಳದ ಅಧಿಕ್ಷಕ ಇಂಜಿನಿಯರ್ ಹೊಳಿಯಾಚಿ ಪರಸಪ್ಪ ಬಸಪ್ಪ ಮೊ. 9449593386, ಕಾರ್ಯಪಾಲಕ ಇಂಜಿನಿಯರ್ ಮಾಣಿಕ್ಯ ರಾಜು ಮೊ. 9945358486 ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರಿ) ಎಂ.ಸಿ. ಭಗವಾನ್ ಇವರನ್ನು ತನಿಖೆಗಾಗಿ ನೇಮಕ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಕೊಡುವುದರ ಮೂಲಕ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರವನ್ನು ಸಾಬೀತುಪಡಿಸಲು ಅನುಕೂಲ ಮಾಡಿಕೊಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರು ಹೆಚ್.ಆರ್. ಶ್ರೀನಿವಾಸಮೂರ್ತಿ, ಮಾರಾನಾಯಕನಹಳ್ಳಿ ಗ್ರಾಮದ ಎಂ.ಎನ್. ಕಿರಣ್ ಕುಮಾರ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News