×
Ad

ಚನ್ನಗಿರಿ: ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಪತ್ತೆ

Update: 2018-05-27 21:01 IST

ಚನ್ನಗಿರಿ,ಮೇ.27: ತಾಲೂಕಿನ ಲಕ್ಷ್ಮಿಸಾಗರ ಗ್ರಾಮದಲ್ಲಿ ಕಳೆದೆರಡು ದಿನಗಳ ಹಿಂದೆ ತಮ್ಮ ಜಮೀನಿಗೆ ತೆರಳಿ ವಾಪಾಸ್ ಬರುತ್ತಿದ್ದ ವೇಳೆ ಡ್ಯಾಂ ನಿಂದ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದ ರೈತನ ಶವ ಭಾನುವಾರ ಪತ್ತೆಯಾಗಿದೆ.

ಬಸಪ್ಪ ಎಂಬ ರೈತ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಳೆದರಡು ದಿನಗಳಿಂದಲೂ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ, ಇಂದು ಬೆಳಗ್ಗೆ ಚೆಕ್ ಡ್ಯಾಂ ಮುಂಭಾಗದಲ್ಲಿ ರೈತ ಬಸಪ್ಪ ಅವರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಚನ್ನಗಿರಿ ಠಾಣಾ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News