ಕೊಳ್ಳೇಗಾಲ: ಕರ್ನಾಟಕ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ
Update: 2018-05-28 21:13 IST
ಕೊಳ್ಳೇಗಾಲ,ಮೇ.28: ಬಿಜೆಪಿ ವತಿಯಿಂದ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಳ್ಳೇಗಾಲ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದಲ್ಲಿ ಎಂದಿನಂತೆ ಅಂಗಡಿ, ಹೋಟೆಲ್‍ಗಳು, ಸಿನಿಮಾ ಮಂದಿರ, ಬಸ್ ಸಂಚಾರ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಿದವು. ಇದರಿಂದ ಬಿಜೆಪಿ ಕರೆ ನೀಡಿದ್ದ ಬಂದ್‍ಗೆ ಕೊಳ್ಳೇಗಾಲ ಜನತೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದಂತೆ ಕಂಡು ಬಂತು.
ಆದರೆ ಬಿಜೆಪಿ ಮುಖಂಡ ಕೂಡ್ಲೂರು ಶ್ರೀಧರ್‍ಮೂರ್ತಿ ಹಾಗೂ ಜಿ.ಪಿ ಶಿವಕುಮಾರ್ ಮಹಿಳಾ ಮೋರ್ಚಾ ಅಧ್ಯಕ್ಷೆ ಉಷಾರಾಣಿ ನೇತೃತ್ವದಲ್ಲಿ ಹತ್ತಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ರಾಜ್ಯ ಸಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ಇದು ಬಿಟ್ಟರೆ ಯಾವುದೇ ಸಂಘಟನೆಗಳು ಬಂದ್‍ಗೆ ಬೆಂಬಲಿಸಿ ಬೀದಿಗಳಿಯದೇ ಇದ್ದದ್ದು ಕಂಡುಬಂತು.