×
Ad

ಸಕಲೇಶಪುರ: ಸಾಂಖ್ಯಿಕ ನಿರೀಕ್ಷಕಿ ಎಸಿಬಿ ಬಲೆಗೆ

Update: 2018-05-28 22:57 IST

ಸಕಲೇಶಪುರ,ಮೇ.28: ಜನನ ಮತ್ತು ಮರಣ ನೊಂದಾಣಿ ಇಲಾಖೆಯ ಸಾಂಖ್ಯಿಕ ನಿರೀಕ್ಷಕಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಸೊಮವಾರ ಸಂಜೆ ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದಿದೆ.

ತಾಲೂಕಿನ ಚಿಕ್ಕನಾಯಕಹಳ್ಳಿ ಗ್ರಾಮದ ಅರಸು ನಗರ ನೀವಾಸಿಯಾದ ಪರಮೇಶ್ ತನ್ನ ತಂದೆ ಲೇಟ್ ರಾಮಯ್ಯರವರ ಮರಣ ನೊಂದಾಣಿ ಮಾಡಿಸಲು ಒಂದು ವಾರದ ಹಿಂದೆ ಬಂದಿದ್ದು, ನೊಂದಾಣಿ ಮಾಡಿಕೊಡಲು ಇಲ್ಲಿಯ ಸಾಂಖ್ಯಿಕ ನಿರೀಕ್ಷಕಿ ಚಂದ್ರಕಲಾ 2 ಸಾವಿರ ರುಪಾಯಿಗಳನ್ನು ಕೇಳಿದ್ದರು ಎನ್ನಲಾಗಿದೆ. ಅಂದು ಹಣ ತಂದಿಲ್ಲವೆಂದು ಹೇಳಿ 200 ರುಪಾಯಿಗಳನ್ನು ಕೊಟ್ಟು ತೆರಳಿ ನಂತರ ಎಸಿಬಿಗೆ ದೂರು ನೀಡಿದ್ದಾರೆ.

ಇವರ ದೂರಿನ ಅನ್ವಯ ಸೋಮವಾರ ಸಂಜೆ ನಾಲ್ಕು ಗಂಟೆಗೆ ಬಾಕಿ ಎರಡು ಸಾವಿರ ಹಣ ಪಡೆಯುವ ಸಂದರ್ಭದಲ್ಲಿ ಎಸಿಬಿ ಡಿವೈಎಸ್ಪಿ ಪೂರ್ಣಚಂದ್ರ ತೇಜಸ್ವಿ ಹಾಗು ಪಿಎಸ್‍ಐ ವೀಣಾ ರವರು ದಾಳಿ ನಡೆಸಿ ಹಣದ ಜೊತೆಗೆ ಚಂದ್ರಕಲಾರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯ ನಂತರ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News