×
Ad

ತಂದೆಯಿಂದಲೇ ಮಗಳ ಅತ್ಯಾಚಾರ: ವ್ಯಕ್ತಿಯ ಬಂಧನ

Update: 2018-05-30 22:27 IST

ಚಿಕ್ಕಮಗಳೂರು, ಮೇ 30: ಪಾಪಿ ತಂದೆಯೊಬ್ಬ ತನ್ನ ಹೆತ್ತ ಮಗಳನ್ನೇ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಕೃತ್ಯಕ್ಕೆ ಬಳಸಿಕೊಂಡ ಅಮಾನವೀಯ ಘಟನೆ ನಗರದಲ್ಲಿ ಬುಧವಾರ ವರದಿಯಾಗಿದೆ.

ನಗರದ ಸಿದ್ದೇಶ್ ಎಂಬಾತ ತನ್ನ 17 ವರ್ಷದ ಮಗಳನ್ನು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ಕೃತ್ಯಕ್ಕೆ ಬಳಸಿಕೊಂಡ ಆರೋಪಿ.

ಪತ್ನಿ ಅಂಗನವಾಡಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿ ಪತ್ನಿ ಇಲ್ಲದ ಸಂದರ್ಭ ನೋಡಿಕೊಂಡು ಆರೋಪಿಯು ಕುಡಿದ ಮತ್ತಿನಲ್ಲಿ ಮಗಳನ್ನು ಹೆದರಿಸಿ, ಬೆದರಿಸಿ ಕಳೆದೊಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದನು ಎನ್ನಲಾಗಿದೆ.

ಇತ್ತೀಚೆಗೆ ಮಗಳ ನಡವಳಿಕೆಯಿಂದ ಸಂಶಯಗೊಂಡ ತಾಯಿ ಮಗಳನ್ನು ವಿಚಾರಣೆ ಮಾಡಿದಾಗ ಪಾಪಿ ತಂದೆಯ ಅಮಾನವೀಯ ಕೃತ್ಯ ಹೊರ ಬಂದಿದೆ. ಇದರಿಂದ ಬೆಚ್ಚಿ ಬಿದ್ದ ತಾಯಿ ಕೂಡಲೇ ಮಗಳೊಂದಿಗೆ ನಗರದ ಮಹಿಳಾ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸಿದ್ದೇಶ್‌ನನ್ನು ಮಂಗಳವಾರ ರಾತ್ರಿಯೇ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News