×
Ad

ಹನೂರು: ಆನೆ ದಂತ ಕದ್ದ ಆರೋಪಿಯ ಬಂಧನ

Update: 2018-05-30 22:30 IST

ಹನೂರು,ಮೇ.30: ಆಕಸ್ಮಿಕವಾಗಿ ಸಾವನ್ನಪ್ಪಿದ ಆನೆಯ ದಂತ ಕಳ್ಳತನ ಮಾಡಿದ್ದ ಆರೋಪಿಯನ್ನು ಅರಣ್ಯ ಇಲಾಖೆಯವರು ಬಂಧಿಸಿ, ಆನೆಯ ದಂತವನ್ನು ವಶ ಪಡಿಸಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ವಲಯ ಅರಣ್ಯದಲ್ಲಿ ನಡೆದಿದೆ.

ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ವಲಯ ಅರಣ್ಯ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಆನೆಯೊಂದು ಆಕಸ್ಮಿಕವಾಗಿ ಕಾಲು ಜಾರಿ ಬೆಟ್ಟದ ಮೇಲಿಂದ ಬಿದ್ದು ಸಾವಿಗೀಡಾಗಿತ್ತು. ಹನೂರು ತಾಲೂಕಿನ ಸೂಳೆಕೊಬೆ ನಿವಾಸಿ ಸಣ್ಣಪುಟ್ಟ ಎಂಬಾತ ಸೀಗೆಸೊಪ್ಪಗಾಗಿ ಹೋಗಿದ್ದ ವೇಳೆ ಸಾವಿಗೀಡಾಗಿದ್ದ ಆನೆಯಿಂದ 15 ಕೆ.ಜಿ.ದಂತ ಬೇರ್ಪಡಿಸಿ, ಮನೆಯಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್ ಓ ಎಳುಕುಂಡಲು ಮಾರ್ಗದರ್ಶನದಲ್ಲಿ ಆರ್.ಎಫ್.ಓ ಸುಂದರ್ ಆರೋಪಿಯನ್ನು ದಂತ ಸಮೇತ ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News