625 ರಲ್ಲಿ 625: ಬೆಳಗಾವಿಯ ಮೊಹಮ್ಮದ್ ಕೈಫ್ ಮುಲ್ಲಾ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ

Update: 2018-05-30 18:53 GMT

ಬೆಳಗಾವಿ, ಮೇ 30: ಇಲ್ಲಿನ ಸಂತ ಝೇವಿಯರ್ ಹೈಸ್ಕೂಲ್ ನ ವಿದ್ಯಾರ್ಥಿ ಮೊಹಮ್ಮದ್ ಕೈಫ್ ಮುಲ್ಲಾ ಎಸೆಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ಆ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಬೆಳಗಾವಿಯ ಪ್ರಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾನೆ. 

ಎಸೆಸೆಲ್ಸಿ ಫಲಿತಾಂಶ ಪ್ರಕಟವಾದಾಗ ಕೈಫ್ ಮುಲ್ಲಾ 625 ರಲ್ಲಿ  624 ಅಂಕ ಪಡೆದಿದ್ದ. ವಿಜ್ಞಾನದಲ್ಲಿ ಆತನಿಗೆ 100 ರಲ್ಲಿ 99 ಅಂಕಗಳು ಬಂದಿದ್ದವು. ಆದರೆ ತಾನು ವಿಜ್ಞಾನ ಪರೀಕ್ಷೆಯಲ್ಲಿ ಎಲ್ಲ ಸರಿ ಉತ್ತರ ಬರೆದಿದ್ದೇನೆ ಎಂಬ ಆತ್ಮವಿಶ್ವಾಸದಲ್ಲಿದ್ದ ಕೈಫ್ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದನು. ಮರುಮೌಲ್ಯಮಾಪನ ಆದ ಮೇಲೆ ಕೈಫ್ ಹೇಳಿದಂತೆ ಆತನಿಗೆ ವಿಜ್ಞಾನದಲ್ಲಿ 100 ಕ್ಕೆ 100 ಅಂಕ ಬಂದಿದೆ. ಅಲ್ಲಿಗೆ 625 ರಲ್ಲಿ  625 ಅಂಕ ಪಡೆಯುವ ಮೂಲಕ ಕೈಫ್ ಮುಲ್ಲಾ ರಾಜ್ಯಕ್ಕೆ ಆಗ್ರ ಸ್ಥಾನಿಯಾಗಿದ್ದಾನೆ. 

ಕೈಫ್ ಸಾಮಾನ್ಯ ಕುಟುಂಬದಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿ. ಈತನ ತಂದೆ ಹರೂನ್ ರಶೀದ್ ಮುಲ್ಲಾ ಸ್ಥಳೀಯ ಸರಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿದ್ದಾರೆ. ತಾಯಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಉರ್ದು ಕಳಿಸುತ್ತಾರೆ. ಮುಂದೆ ವೈದ್ಯನಾಗಿ ಐ.ಎ.ಎಸ್ ಅಧಿಕಾರಿಯಾಗುವುದು ಕೈಫ್ ಮುಲ್ಲಾನ ಬಯಕೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News