ಮಡಿಕೇರಿ: ಬ್ಯಾಂಕ್ ನೌಕರರ ಮುಷ್ಕರ

Update: 2018-05-30 18:25 GMT

ಮಡಿಕೇರಿ,ಮೇ.30 : ಭಾರತೀಯ ಬ್ಯಾಂಕ್‍ಗಳ ಸಂಘವು (ಐಬಿಎ) ಮುಂದಿಟ್ಟಿರುವ ವೇತನ ಪರಿಷ್ಕರಣೆ ಪ್ರಸ್ತಾವ ವಿರೋಧಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು ಎರಡು ದಿನಗಳ ಕಾಲ ದೇಶವ್ಯಾಪಿ ಕರೆ ನೀಡಿರುವ ಮುಷ್ಕರಕ್ಕೆ ಕೊಡಗು ಜಿಲ್ಲೆಯಲ್ಲಿ ಬ್ಯಾಂಕ್ ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಮೂರು ತಾಲ್ಲೂಕುಗಳಾದ ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ಭಾಗದಲ್ಲಿ ಬ್ಯಾಂಕ್‍ಗಳು ಇಂದು ಕಾರ್ಯನಿರ್ವಹಿಸಿಲ್ಲ. 2017ರ ಮೇ ತಿಂಗಳಿನಿಂದಲೂ “ಐಬಿಎ” ಜೊತೆ ಅನೇಕ ಸುತ್ತಿನ ಮಾತುಕತೆ ನಡೆದಿದ್ದರೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಫಲಪ್ರದವಾಗುವಂತಹ ಪ್ರಸ್ತಾವ ಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ' ಬ್ಯಾಂಕ್ ನೌಕರರ ಸಂಘಟನೆಗಳು ತಿಳಿಸಿವೆ.

ಮುಷ್ಕರದಿಂದಾಗಿ ಗ್ರಾಹಕರ ವೇತನ ಮತ್ತು ಎಟಿಎಂ ವಹಿವಾಟಿಗೆ ಆಡಚಣೆಯಾಗಿದೆ. ತಿಂಗಳ ಕೊನೆಯಾಗಿರುವುದರಿಂದ ವೇತನ ಪಡೆಯುವವರಿಗೆ ತೊಂದರೆಯಾಗಿದೆ. ಆನ್‍ಲೈನ್ ಮೂಲಕ ವಹಿವಾಟು ನಡೆಸುವವರಿಗೆ ಬ್ಯಾಂಕ್ ಮುಷ್ಕರಿಂದ ಯಾವುದೇ ತೊಂದರೆಯಾಗಿಲ್ಲ. ಎಟಿಎಂಗಳನ್ನು ಹೆಚ್ಚಿಗೆ ಬಳಸುವ ವರ್ತಕರು ಹಾಗೂ ಗ್ರಾಹಕರು ತೊಂದರೆ ಅನುಭವಿಸಿದರು. ಮೇ 31 ರಂದು ಕೂಡ ಮುಷ್ಕರ ಮುಂದುವರಿಯಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News