×
Ad

ಹಿರಿಯ ಪತ್ರಕರ್ತ ಟಿ. ವೆಂಕಟರಾಮ್ ನಿಧನ: ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ಸಂತಾಪ

Update: 2018-05-31 17:55 IST

ಹಾಸನ,ಮೇ.31: ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಮೈಸೂರು ಪತ್ರಿಕೆ ಸಂಪಾದಕ ಟಿ. ವೆಂಕಟರಾಮ್ ನಿಧನವಾದ ಹಿನ್ನಲೆಯಲ್ಲಿ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು. 

94 ವರ್ಷದ ವೆಂಕಟರಾಮ್ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೈಸೂರು ವಿದ್ಯಾರಣ್ಯಪುರಂನ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜ್ಯೋತ್ಸವ, ಪತ್ರಿಕಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಇವರ ಬಗ್ಗೆ ಹಿರಿಯ ಪತ್ರಕರ್ತರು ಅಂದಿನ ದಿನಗಳಲ್ಲಿ ಅವರು ಸೇವೆ ಮಾಡಿದ ಬಗ್ಗೆ ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ವಾರ್ತಾಧಿಕಾರಿ ವಿನೋದ್‍ಚಂದ್ರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿನಾಕಲಗೂಡು, ಹಿರಿಯ ವಾರ್ತಾಧಿಕಾರಿ ವಿನೋದ್‍ಚಂದ್ರ, ಉಪಾಧ್ಯಕ್ಷ ಅತೀಖುರ್ ರೆಹಮನ್, ಖಜಾಂಚಿ ಪ್ರಕಾಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸನ್ನಕುಮಾರ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News