ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್ ಮೂರ್ತಿ

Update: 2018-05-31 17:52 GMT

ತರೀಕೆರೆ, ಮೇ 31: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಂದು ವರ್ಗ ಸಮುದಾಯದ ಆಶಯಗಳು ಪ್ರಜಾಪ್ರಭುತ್ವದ ಮೇಲ್ಪಂಕ್ತಿ ಆಧರಿಸಿ ನಡೆಯುವಂತಾದಾಗ ಮಾತ್ರ ವ್ಯವಸ್ಥೆಯಲ್ಲಿ ಗೌರವ ಮತ್ತು ಮಾನ್ಯತೆಗೆ ಅರ್ಥ ಕಲ್ಪಿತವಾಗುತ್ತದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಎಲ್ ಮೂರ್ತಿ ಅಭಿಪ್ರಾಯಪಟ್ಟರು.

ಅವರು ತರೀಕೆರೆ ಪ್ರವಾಸಿ ಮಂದಿರದಲ್ಲಿ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರದಿಂದ ಸ್ಪರ್ಧೆಯಲ್ಲಿರುವ ಎಸ್.ಪಿ.ದಿನೇಶ್ ಮತ್ತು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಕೆ.ಕೆ.ಮಂಜುನಾಥ್ ಪರ ಮತಯಾಚನೆ ಮಾಡಿ ಮಾತನಾಡಿದರು. 

ಈಗಾಗಲೇ ಬಿಜೆಪಿಯವರು ರಾಜ್ಯದಲ್ಲಿ ನಡೆದಿರುವ ಪ್ರತಿಯೊಂದು ಚುನಾವಣೆಯಲ್ಲಿ ಕುದುರೆ ವ್ಯಾಪಾರದ ಮೂಲಕ ಅಧಿಕಾರ ಹಿಡಿಯುವ ಪರಿಪಾಠ ಬೆಳೆಸಿಕೊಂಡು ಇಡೀ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಕಳೆದ ವಿಧಾನಸಭೆ ಚುನಾವಣೆಯಿಂದ ಮುಖಭಂಗ ಅನುಭವಿಸಿದ್ದಾರೆ. ಮತದಾರ ಜಾಗೃತನಾಗಬೇಕು. ಆಗ ಇಂತಹ ಚುನಾವಣೆಯಲ್ಲಿ ತಮ್ಮ ಸ್ವಂತ ಮತ್ತು ಸ್ವಹಿತಕ್ಕೆ ಬೆಳೆಯುವವರನ್ನು ಮತದಾರ ತಿರಸ್ಕರಿಸಬಹುದು. ಇದರಿಂದ ಪ್ರಜಾಪ್ರಭುತ್ವಕ್ಕೆ ನಾವು ಗೌರವಿಸದಂತಾಗುತ್ತಾದೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ 5 ವಿಧಾನಸಭೆ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಅವಕಾಶವಿತ್ತು. ಆದರೆ ಬಿ.ಜೆ.ಪಿಯವರು ಮಂತ್ರವಾದಿಗಳಂತೆ ಮಾತನಾಡುವ ಕಲೆ ರೂಡಿಸಿಕೊಂಡಿರುತ್ತಾರೆ. ಮತದಾರ ಇದರ ಬಗ್ಗೆ ಜಾಗೃತನಾಗುವಂತೆ ಮತ್ತು ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಇದುವರೆಗೂ ಚರ್ಚೆಯಾಗದಿರುವುದು ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಹಂತದಲೂ ಎಲ್ಲದರ ಬಗ್ಗೆ ಅವಲೋಕನ ಮಾಡಿ ಅದರ ಪರಿಹಾರಕ್ಕೆ ಮುಂದಾಗಬೇಕಾಗಿದೆಯೆಂದು ತಿಳಿಸಿದರು.

ಅಭ್ಯರ್ಥಿಗಳಾದ ಎಸ್.ಪಿ ದಿನೇಶ್, ಕೆ.ಕೆ ಮಂಜುನಾಥ್ ಮೂಲತಃ ಸವಾಲುಗಳ ಪರಿಚಯ ಇರುವವರು. ಇಂತಹವರು ವಿಧಾನ ಪರಿಷತ್‍ನಲ್ಲಿ ಪ್ರವೇಶಿಸುವುದರಿಂದ ನೌಕರರ ಸಮಸ್ಯೆ, ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ನೂತನ ಪಿಂಚಣಿಗೆ ಯೋಜನೆ ಬದಲು ಹಳೆ ಪಿಂಚಣಿ ಯೋಜನೆ ಜಾರಿ, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸಂಜೀವಿನಿ ಯೋಜನೆ, ಅತಿಥಿ ಉಪನ್ಯಾಸಕರಿಗೆ ವೇತನ ಮತ್ತು ಸೇವಾಭದ್ರತೆ ಅನುಕೂಲ ಕಲ್ಪಿಸಲು ಮುಂದಾಗಲು ಸಹಕಾರಿಯಾಗಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕೋರಿದರು.

ಅಜ್ಜಂಪುರ ವ್ಯಾಪ್ತಿಯ ಮತದಾರರಿಗೆ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದ್ದು ತರೀಕೆರೆಯಲ್ಲಿ ಮಿನಿ ವಿಧಾನಸೌಧದಲ್ಲಿ ಅಂದೂ ಬೆಳ್ಳಗೆ 8 ಗಂಟೆಯಿಂದ ಸಂಜೆ 4 ಘಂಟೆಯವರೆಗೆ ಮತಚಲಾಯಿಸಲು ಸಮಯ ನಿಗಧಿ ಪಡಿಸಲಾಗಿದೆ. ಇದರೊಂದಿಗೆ ಒಟ್ಟು ಮತದಾರರು ಪದವೀಧರರ ಕ್ಷೇತ್ರದಿಂದ 8,335 ಇದ್ದು ಶಿಕ್ಷಕರ ಕ್ಷೇತ್ರದಿಂದ 3,308 ಮತದಾರರು ಇರುತ್ತಾರೆ. ಆದರಂತೆ ತರೀಕೆರೆ ಪದವೀಧರ ಕ್ಷೇತ್ರದಲ್ಲಿ 1410 ಮತದಾರರು ಮತ್ತು ಶಿಕ್ಷಕರ ಕ್ಷೇತ್ರದಿಂದ 508 ಮತದಾರರು ಇರುತ್ತಾರೆ. ಜೂ.8ರಂದು ನಡೆಯುವ ಚುನವಾಣೆಯಲ್ಲಿ ಪದವೀಧರರ ಚುನಾವಣೆಯಲ್ಲಿ 2 ಮತಗಟ್ಟೆ ಇದ್ದು ಶಿಕ್ಷಕರ ಚುನವಣೆಗೆ 1 ಮತಗಟ್ಟೆ ಇರುತ್ತದೆ ಎಂದು ತಿಳಿಸಿದರಲ್ಲದೆ ಇವರನ್ನು ಬಹುಮತದಿಂದ ಗೆಲಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಡಿ.ಸಿ.ಸಿ ಬ್ಯಾಂಕಿನ ನಿದೇರ್ಶಕರಾದ ಬಿ.ಆರ್ ರವಿ, ಮಹೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News