ಹೊನ್ನಾಳಿ: ಟ್ರ್ಯಾಕ್ಟರ್ ಢಿಕ್ಕಿ; ಓರ್ವ ಮೃತ್ಯು
Update: 2018-06-01 22:59 IST
ಹೊನ್ನಾಳಿ,ಜೂ.01: ಬೈಕ್‍ಗೆ ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ನಾಗರಾಜಪ್ಪ(35) ಮೃತ ಬೈಕ್ ಸವಾರ.
ತಾಲೂಕಿನ ಅರಕೆರೆ ಎಕೆ ಕಾಲೋನಿ ಗ್ರಾಮದಿಂದ ಘಂಟಾಪುರಕ್ಕೆ ಬೈಕ್ ತೆರಳುತ್ತಿತ್ತು. ಈ ವೇಳೆ ಕುಂದೂರು ಕಡೆಯಿಂದ ಹೊನ್ನಾಳಿಗೆ ಬರುತ್ತಿದ್ದ ಹದಡಿ ಸಮೀಪದ ಎಡೇಹಳ್ಳಿ ಗ್ರಾಮದ ಟ್ರ್ಯಾಕ್ಟರ್ ಬೈಕ್‍ಗೆ ಢಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಹೊನ್ನಾಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.