ಮೈಸೂರು: ಪತ್ನಿಯ ಕೊಂದು ಆತ್ಮಹತ್ಯೆಗೆ ಶರಣಾದ ಪತಿ
Update: 2018-06-02 22:49 IST
ಮೈಸೂರು,ಜೂ.2: ವ್ಯಕ್ತಿಯೋರ್ವ ಪತ್ನಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಯಪುರ ಹೋಬಳಿಯಲ್ಲಿ ನಡೆದಿದೆ
ಜಯಪುರ ಹೋಬಳಿಯ ಲಿಂಗರಾಜು(45) ಪತ್ನಿ ಚಿಕ್ಕ ಅಂಕಿಯನ್ನು ಕಲ್ಲೆತ್ತಿ ಹಾಕಿ ಕೊಲೆಗೈದು ಶವವನ್ನು ಪೊದೆಯಲ್ಲಿ ಬಿಸಾಡಿ, ನಂತರ ತನ್ನ ನಾಲ್ವರು ಮಕ್ಕಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಆತನ ಮನೆಯ ಸಮೀಪದ ತೆಂಗಿನ ತೋಪಿನಲ್ಲಿ ಮೃತದೇಹ ಕಂಡು ಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.