×
Ad

ಸಕಲೇಶಪುರ: ಕ್ರೇನ್ ಉರುಳಿ ಇಂಜಿನಿಯರ್ ಮೃತ್ಯು

Update: 2018-06-03 21:31 IST

ಸಕಲೇಶಪುರ,ಜೂ.03: ಶಿರಾಡಿ ಘಾಟ್ ನಲ್ಲಿ ನಡೆಯುತ್ತಿರುವ ಮಾರುತಿ ಪವರ್ ಜೆನ್ ಜಲವಿದ್ಯುತ್ ಯೋಜನೆ ಘಟಕದ ಕಾಮಗಾರಿ ಸಂದರ್ಭದಲ್ಲಿ ಕ್ರೇನ್ ಉರುಳಿ ಇಂಜಿನಿಯರೊಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಇಂಜಿನಿಯರ್ ಮಹೇಶ್ (28) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಎತ್ತರದ ಗುಡ್ಡದತ್ತ ತೆರಳುತ್ತಿದ್ದ ಕ್ರೈನ್ ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಉರುಳಿದ್ದಾಗಿ ತಿಳಿದು ಬಂದಿದೆ. ಈ ವೇಳೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹುಣಸೂರು ತಾಲೂಕಿನ ಕಟ್ಟೆಮರಳವಾಡಿ ಗ್ರಾಮದ ಇಂಜಿನಿಯರ್ ಮಹೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಸೋನು, ಅಭಯ್ ಹಾಗೂ ಪರ್ವೇಜ್ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಇವರಿಗೆ ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗಿದೆ. ಮೃತ ಮಹೇಶ್ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News