ಮಂಡ್ಯ: ನೇಣುಬಿಗಿದು ರೈತ ಆತ್ಮಹತ್ಯೆ
Update: 2018-06-03 22:54 IST
ಮಂಡ್ಯ, ಜೂ.3: ಖಾಸಗಿ ಹಣಕಾಸು ಸಂಸ್ಥೆಯ ಕಿರುಕುಳ ತಾಳಲಾರದೇ ರೈತನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವೀಂದ್ರ(33) ಆತ್ಮಹತ್ಯೆ ಮಾಡಿಕೊಂಡ ರೈತ. ಟ್ರ್ಯಾಕ್ಟರ್ ಖರೀದಿಗಾಗಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಸಾಲ ಮಾಡಿದ್ದ ರವೀಂದ್ರ ಅವರಿಗೆ ಸಾಲ ಮರುಪಾವತಿಗೆ ಸಂಸ್ಥೆ ಒತ್ತಾಯಿಸಿದ್ದರಿಂದ ಬೇಸತ್ತು ತೋಟದ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ.
ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.