×
Ad

ತುಮಕೂರು: ಸಿದ್ದಗಂಗಾ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ

Update: 2018-06-03 23:03 IST

ತುಮಕೂರು,ಜೂ.03: ನಗರದ ಶ್ರೀಸಿದ್ದಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಭಾನುವಾರು 15ಕ್ಕೂ ಹೆಚ್ಚು ವಿವಿಧ ರೋಗಗಳ ಬಗ್ಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನುರಿತ ತಜ್ಞ ಸೂಪರ್ ಸೆಷ್ಟಾಲಿಟಿ ವೈದ್ಯರಿಂದ ಏರ್ಪಡಿಸಲಾಗಿತ್ತು.

ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್ ಅವರ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಹೃದ್ರೋಗ, ನರರೋಗ, ಕಿಡ್ನಿ, ನರವಿಜ್ಞಾನ, ಮೂಳೆ ತಜ್ಞರು, ಮಕ್ಕಳ ತಜ್ಞರು ಬೆಂಗಳೂರಿನ ವಿವಿಧ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ರೋಗಿಗಳನ್ನು ಪರೀಕ್ಷಿ, ಸೂಕ್ತ ಸಲಹೆ ಮತ್ತು ಔಷಧಿ ನೀಡಿದರು.

ಉಚಿತ ಆರೋಗ್ಯ ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ 1100 ರಿಂದ 1300 ಕ್ಕೂ ಅಧಿಕ ವಿವಿಧ ರೋಗಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಟ್ಟು, ತಜ್ಞ ವೈದ್ಯರುಗಳ ಸಲಹೆ ಪಡೆದರು. ಅಲ್ಲದೆ ಸ್ಥಳದಲ್ಲಿಯೇ ಶೇ20 ರ ರಿಯಾಯತಿ ದರದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ ರೋಗಿಗಳಿಗೆ ಔಷಧಿ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News