ಓ ಮೆಣಸೇ...

Update: 2018-06-04 05:42 GMT

ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ -ಎಚ್.ಡಿ. ಕುಮಾರ ಸ್ವಾಮಿ, ಮುಖ್ಯಮಂತ್ರಿ 

ತಮಗೆ 38 ಸ್ಥಾನ ಗೆಲ್ಲಿಸಿದ ತಪ್ಪಿಗೆ ಅವರೂ ಕಾಂಗ್ರೆಸ್ ಮುಲಾಜಿನಲ್ಲೇ ಇರಬೇಕೇ?

---------------------

ದೇಶದ ಅಭಿವೃದ್ಧಿ ಎನ್ನುವುದು ಕಾಂಗ್ರೆಸ್‌ಗೆ ಒಂದು ದೊಡ್ಡ ಜೋಕ್ ಆಗಿ ಬಿಟ್ಟಿದೆ -ನರೇಂದ್ರ ಮೋದಿ, ಪ್ರಧಾನಿ

ಅಭಿವೃದ್ಧಿ ಪದದ ಬೆಲೆಯನ್ನು ನೀವು ಆ ಮಟ್ಟಕ್ಕೆ ಕೆಳಗಿಳಿಸಿದ್ದೀರಿ.

---------------------

ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿ ಆಸ್ಪತ್ರೆ ಸೇರಿದ್ದಾರೆ. ಅದರ ನಾಯಕರು ಸೇರಿ ಸರಕಾರ ರಚಿಸಿದ್ದಾರೆ -ಶೋಭಾ ಕರಂದ್ಲಾಜೆ, ಸಂಸದೆ

ಆಸ್ಪತ್ರೆಯಲ್ಲಿರುವವರ ಬಿಲ್ ಕಟ್ಟಿರುವುದು ಬಿಜೆಪಿ ಪಕ್ಷವೇ?

---------------------

ಜೀವನದ ಪ್ರತಿ ಘಟನೆಯನ್ನೂ ಆಟವೆಂಬಂತೆ ಆನಂದಿಸಿ - ಸಚಿನ್ ತೆಂಡುಲ್ಕರ್, ಮಾಜಿ ಕ್ರಿಕೆಟ್ ಆಟಗಾರ

ಆದರೆ ಕ್ರಿಕೆಟ್ ಆಟವೆಂದು ಆನಂದಿಸಿದರೆ, ಬೆಟ್ಟಿಂಗ್, ಫಿಕ್ಸಿಂಗ್ ವಂಚನೆಗೆ ಬಲಿಯಾಗಬೇಕಾದೀತು.

---------------------

ಭಾರತ ಮಾತೆ ಇಂದು ಭಾರತ ಮಾತೆ ಆಗಿ ಉಳಿದಿಲ್ಲ, ಹಿಂದೂ ಮಾತೆಯಾಗಿದ್ದಾಳೆ -ಚಂದ್ರ ಶೇಖರ ಪಾಟೀಲ, ಸಾಹಿತಿ

ಜೊತೆಗೆ ಆರ್ಥಿಕವಾಗಿ ಹಿಂದುಳಿದ ಮಾತೆ ಕೂಡ.

---------------------

ಹನುಮಂತ ಜಗತ್ತಿನ ಪ್ರಪ್ರಥಮ ಆದಿವಾಸಿ - ಗ್ಯಾನ್‌ದೇವ್,  ರಾಜಸ್ಥಾನ ಶಾಸಕ

ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವುದು ಇದೇ ಕಾರಣಕ್ಕಾಗಿರಬಹುದೇ?
---------------------

ಸಿಎಂ ಕುಮಾರಸ್ವಾಮಿ ಸನ್ನಿವೇಶದ ಶಿಶು - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ

ಬಿಜೆಪಿಯವರಾಗಿದ್ದರೆ ಕಾಂಗ್ರೆಸ್ ಸೃಷ್ಟಿಸಿದ ಪ್ರನಾಳ ಶಿಶು ಎನ್ನುತ್ತಿದ್ದರು.

---------------------

ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆ ಮಹಾತ್ಮರ ಕಥೆಗಳನ್ನು ಹೇಳಿಕೊಡುವ ಕೆಲಸವಾಗಬೇಕು -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಈಗ ಟಿವಿ, ಪತ್ರಿಕೆಗಳೆಲ್ಲ ಸುದ್ದಿಗಳ ಹೆಸರಲ್ಲಿ ಕತೆಗಳನ್ನೇ ಹೆಣೆಯುತ್ತಿವೆ. ಶಾಲೆಯಲ್ಲಿ ಪ್ರತ್ಯೇಕವಾಗಿ ಅಗತ್ಯವಿದೆಯೇ?
---------------------

ರಾವಣ ಸೀತೆಯನ್ನು ಅಪಹರಿಸಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಅಪಹರಿಸಿದೆ -ಮುರಳೀಧರರಾವ್, ರಾಜ್ಯ ಬಿಜೆಪಿ ಉಸ್ತುವಾರಿ.

 ಐಟಿ ಅಧಿಕಾರಿಗಳ ಲಕ್ಷ್ಮಣ ರೇಖೆಯನ್ನು ದಾಟಿ, ಸೀತೆಯನ್ನು ಅಪಹರಿಸಿದ ಕಾಂಗ್ರೆಸ್ ಎಂದರೆ ಚೆನ್ನಾಗಿತ್ತು.

---------------------

ಸಾಗರದಂತಹ ಕ್ಷೇತ್ರದಲ್ಲಿ ನನ್ನ ಸೋಲು ತಲೆತಗ್ಗಿಸುವಂತಹದ್ದು - ಕಾಗೋಡು ತಿಮ್ಮಪ್ಪ, ಕಾಂಗ್ರೆಸ್ ಮುಖಂಡ

ತಗ್ಗಿಸಿ. ಬೇಡ ಎಂದವರಾರು?

---------------------

ಸಿಎಂ ಕುಮಾರಸ್ವಾಮಿ ಸೇರಿದಂತೆ ಯಾರನ್ನೂ ನೆಮ್ಮದಿಯಿಂದಿರಲು ದೇವೇಗೌಡ ಬಿಡುವುದಿಲ್ಲ -ವಿ. ಸೋಮಣ್ಣ, ಶಾಸಕ

ಸದ್ಯಕ್ಕೆ ನೆಮ್ಮದಿ ಕಳೆದುಕೊಂಡವರ ಹತಾಶೆಯ ಮಾತು.

---------------------

ದೋಸ್ತಿ ಸರಕಾರದಲ್ಲಿ ಹಾಲು ಕೊಡುವ ಹಸುವಿಗಾಗಿ ಕಿತ್ತಾಟ -ಶೋಭಾ ಕರಂದ್ಲಾಜೆ, ಸಂಸದೆ

ತಾವು ನಕಲಿ ಗೋರಕ್ಷಕರ ಪಾತ್ರ ನಿರ್ವಹಿಸುವಂತಿದೆ.

---------------------

ಪ್ರಧಾನಿ ಮೋದಿ ರಾಜಕೀಯ ಅಸಹಿಷ್ಣುತೆಯ ಅತಿದೊಡ್ಡ ಬಲಿಪಶು - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಪಶು ಎನ್ನುವುದು ಒಪ್ಪತಕ್ಕ ಮಾತು.

---------------------
ನರೇಂದ್ರ ಮೋದಿ ಮತ್ತು ಅಮಿತ್ ಶಾ ರನ್ನು ನೋಡುವಾಗ ಹಿಟ್ಲರ್ ಹಾಗೂ ಮುಸಲೋನಿಯ ನೆನಪಾಗುತ್ತದೆ - ವೈ ರಾಮಕೃಷ್ಣುಡು, ಆಂಧ್ರ ಪ್ರದೇಶ ಸಚಿವ.

ಜಾತ್ಯತೀತ ಪಕ್ಷಗಳ ನಾಯಕರನ್ನು ನೋಡುವಾಗ ಪಿಟೀಲು ಬಾರಿಸುವ ನೀರೋ ನೆನಪಾಗುತ್ತಾನೆ.

---------------------

ಪೆಟ್ರೋಲ್ ದರ ಒಂದು ಪೈಸೆ ಇಳಿಕೆಗೂ ನಮಗೂ ಸಂಬಂಧವಿಲ್ಲ - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ

ಏರಿಕೆಗೆ ಮಾತ್ರ ಸಂಬಂಧ ಇದೆ ಎಂದಾಯಿತು.

---------------------

ಸಿಎಂ ಕುಮಾರಸ್ವಾಮಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ - ಸಿ.ಟಿ. ರವಿ, ಶಾಸಕ

ಕಾಂಗ್ರೆಸ್-ಜೆಡಿಎಸ್ ಎರಡಕ್ಕೂ ಬೆಳಕು ಬೀಳಲಿ ಎಂದು.

---------------------

ವಿಶ್ವದ ಯಶಸ್ವಿ ಸಾಧನೆಯ ಹಿಂದೆ ಭಾರತೀಯರಿದ್ದಾರೆ -ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ

ಭಾರತದ ವೈಫಲ್ಯಗಳ ಹಿಂದೆಯೂ ಭಾರತೀಯರ ಕೊಡುಗೆಯೇ ದೊಡ್ಡದು.

---------------------

ಅಮಿತ್ ಶಾ ಮತ್ತು ನರೇಂದ್ರ ಮೋದಿ ರಾಜಕೀಯ ಉದ್ದೇಶಕ್ಕಾಗಿ ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ -ಡಿ.ಕೆ. ಶಿವಕುಮಾರ್, ಮಾಜಿ ಸಚಿವ

ಮತದಾರರು ರಾಜಕಾರಣಿಗಳಿಂದ ಅನುಭವಿಸುತ್ತಿರುವ ಚಿತ್ರಹಿಂಸೆ ಸಣ್ಣದೇ?
---------------------

ಹೆಚ್ಚು ದೂರ ಜಿಗಿಯಬೇಕಾದರೆ ಎರಡು ಹೆಜ್ಜೆ ಹಿಂದೆ ಇಡಬೇಕಾಗುತ್ತದೆ - ರಾಜನಾಥ್ ಸಿಂಗ್, ಕೇಂದ್ರ ಸಚಿವ

ಇತ್ತೀಚೆಗೆ ಹಿಂದೆ ಇಡುವ ಹೆಜ್ಜೆಗಳೇ ಜಾಸ್ತಿಯಾಗಿದೆ.

---------------------

ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ - ನಳಿನ್ ಕುಮಾರ್ ಕಟೀಲು, ಸಂಸದ

ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯಲು ಹೇಗೆ ಸಾಧ್ಯ?

---------------------

(ಉಪಚುನಾವಣೆಯಲ್ಲಿ) ಕಾಂಗ್ರೆಸ್ ತಾನು ಗೆಲ್ಲದಿದ್ದರೂ ಬಿಜೆಪಿ ಸೋತಿತೆಂದು ಸಂಭ್ರಮಾಚರಿಸುತ್ತಿದೆ - ಅಮಿತ್‌ಶಾ, ಬಿಜೆಪಿ ಅಧ್ಯಕ್ಷ

ಬೇರೆ ರಾಜ್ಯಗಳಲ್ಲಿ ಅದೇ ರೀತಿ ನೀವು ಸಂಭ್ರಮಿಸಿಲ್ಲವೇ?

---------------------

ಮಹಾಭಾರತದ ಕಾಲದಲ್ಲೇ ಪತ್ರಿಕೋದ್ಯಮವಿತ್ತು - ದಿನೇಶ್ ಶರ್ಮಾ, ಉ.ಪ್ರ. ಉಪಮುಖ್ಯಮಂತ್ರಿ

ತಮ್ಮ ಪಕ್ಷದ ಜಾಹೀರಾತುಗಳು ಅದರಲ್ಲೂ ಪ್ರಕಟವಾಗುತ್ತಿತ್ತೇ?

---------------------

ಹಣದ ಮುಂದೆ ಏನೂ ನಡೆಯುವುದಿಲ್ಲ ಎಂಬುದು ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸಾಬೀತಾಗಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ವಿಧಾನ ಸಭೆಯಲ್ಲಿ ತಮ್ಮ ಪಕ್ಷ 104 ಸ್ಥಾನ ದೊರಕಿದಾಗಲೇ ಜನರಿಗೆ ಮನವರಿಕೆಯಾಗಿದೆ.
 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...