ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ವಿವಿಧ ಯೋಜನೆ ತರಲಾಗುವುದು : ಶಾಸಕ ಎನ್.ಮಹೇಶ್
Update: 2018-06-04 23:00 IST
ಕೊಳ್ಳೇಗಾಲ,ಜೂ.04: ಕೊಳ್ಳೇಗಾಲದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ವಿವಿಧ ಯೋಜನೆ ತರಲಾಗುವುದು ಎಂದು ನೂತನ ಶಾಸಕ ಎನ್.ಮಹೇಶ್ ಅವರು ತಿಳಿಸಿದರು.
ಇಂದು ಶಾಸಕರ ಮನೆಯಲ್ಲಿ ಲೋಕೋಪೋಯೋಗಿ ಇಲಾಖೆ ಪ್ರಥಮದರ್ಜೆ ಗುತ್ತಿಗೆದಾರ ಓಲೆಮಹದೇವರವರು ನೂತನ ಶಾಸಕರಿಗೆ ಮೈಸೂರು ಪೇಟ ಧರಿಸಿ ಭಾರಿ ಗಾತ್ರದ ಹೂವಿನ ಹಾರ ಹಾಕಿ ಸನ್ಮಾನಿಸಿದ ಬಳಿಕ ಶಾಸಕ ಎನ್.ಮಹೇಶ್ ಮಾತನಾಡಿ, ಯೋಜನೆಗಳನ್ನು ಜಾರಿಗೆ ತಂದು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.