ಮಂಡ್ಯ: ಜೂ.9 ರಂದು ರಾಜ್ಯಮಟ್ಟದ ಕವಿಕಾವ್ಯ ಮೇಳ
ಮಂಡ್ಯ, ಜೂ.5: ರಾಗ ರಂಜನಿ ಕಲಾತಂಡ, ಚುಟುಕು ಸಾಹಿತ್ಯ ಪರಿಷತ್, ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಜೂ.9ರಂದು ಬೆಳಗ್ಗೆ 9ಕ್ಕೆ ನಗರದ ಗಾಂಧಿಭವನದಲ್ಲಿ 'ಕುಸುಮಾಂಜಲಿ' ರಾಜ್ಯಮಟ್ಟದ ಕವನ ಸಂಕಲನ ಬಿಡುಗಡೆ, 18ನೇ ಕವಿಕಾವ್ಯ ಮೇಳ, ಅಂಕವೀರ ಪುರಸ್ಕಾರ ಹಾಗೂ ಕಲ್ಪವೃಕ್ಷ ಕವನ ಸಂಕಲ ಬಿಡುಗಡೆ ಮತ್ತು ವಿವಿಧ ಕ್ಷೇತ್ರದ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹದೇವು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ, ರೇಣುಕಾಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮೇಳದ ಅಧ್ಯಕ್ಷರಾಗಿ ಬಾಗಲಕೋಟೆಯ ಸಾಹಿತಿ ಹೇಮಾದೇಸಾಯಿ ಭಾಗವಹಿಸಲಿದ್ದಾರೆ. ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ.ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಆರುಣಜ್ಯೋತಿ, ದಾಕ್ಷಾಯಿಣಿ ಉಮೇಶ್, ಕೆ.ಮಂಜುಳಾರಮೇಶ್ ಹಾಗೂ ಉಮೇಶ್ ಉಪಸ್ಥಿತರಿದ್ದರು.