×
Ad

ಹನೂರು: ಬೈಕ್‍ಗೆ ಲಾರಿ ಢಿಕ್ಕಿ; ಇಬ್ಬರಿಗೆ ಗಾಯ

Update: 2018-06-07 21:53 IST

ಹನೂರು,ಜೂ.07: ಚಲಿಸುತ್ತಿದ್ದ ಬೈಕ್‍ಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮತ್ತು ಇನ್ನೊಬ್ಬ ವ್ಯಕ್ತಿಗೆ ತೀವ್ರ ಪೆಟ್ಟಾಗಿರುವ ಘಟನೆ ಹನೂರು ಪಟ್ಟಣದ ಸಮೀಪದ ಹುಲುಸುಗುಡ್ಡೆ ಬಳಿ ನಡೆದಿದೆ.

ಗುರುವಾರ ಸಂಜೆ ಕೊಳ್ಳೇಗಾಲದಿಂದ ಹನೂರು ಮಾರ್ಗವಾಗಿ ಬೈಕ್‍ನಲ್ಲಿ ಬರುತ್ತಿದ್ದ ಹನೂರು ಪಟ್ಟಣದ ಆದಿತ್ಯಬೇಕರಿ ಮಾಲಿಕ ವಿಜಯ್ (34) ಮತ್ತು ಈತನ ಸಹೋದರನ ಮಗು ರಾಹುಲ್ (7)ಗೆ ಹಿಂಬದಿಯಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ಈ ವೇಳೆ ವಿಜಯ್ ಹಾಗೂ ಬಾಲಕನಿಗೆ ಗಂಬೀರ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹನೂರು ಪೋಲಿಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News