×
Ad

ಹನೂರು:ಪ್ರೀತಿಸಿ, ಮದುವೆಯಾಗಲು ನಿರಾಕರಿಸಿದ ಪೊಲೀಸ್ ಪೇದೆ ಮೇಲೆ ಎಫ್‍ಐಆರ್

Update: 2018-06-07 22:05 IST

ಹನೂರು,ಜೂ.07: ಮಹಿಳಾ ಪೊಲೀಸ್ ಪೇದೆಯನ್ನು ಪ್ರೀತಿಸಿ, ಮದುವೆಯಾಗಲು ನಿರಾಕರಿಸಿದ್ದಾರೆ ಎನ್ನಲಾದ ಪೊಲೀಸ್ ಪೇದೆಯ ಮೇಲೆ ಎಫ್‍ಐಆರ್ ದಾಖಲಾಗಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಂದಕುಮಾರ್ ಎಂಬ ಪೇದೆ ಹನೂರು ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯನ್ನು ಪ್ರೀತಿಸಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎನ್ನಲಾಗಿದ್ದು, ನಂತರ ಬೇರೆ ಮದುವೆಯಾಗಲು ಮುಂದಾದಾಗ ಮಹಿಳಾ ಪೇದೆ ನೀಡಿದ ದೂರಿನನ್ವಯ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 

ಆರೋಪಿ ನಂದಕುಮಾರ್ ರವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News