×
Ad

ಹೊನ್ನಾವರ: ಮರಳು ಸಾಗಾಟವನ್ನು ಪ್ರಶ್ನಿಸಿದವರ ಮೇಲೆ ಮಾರಣಾಂತಿಕ ಹಲ್ಲೆ; ಆರೋಪ

Update: 2018-06-07 23:00 IST

ಹೊನ್ನಾವರ,ಜೂ.07: ತಾಲೂಕಿನ ಮಾಳ್ಕೋಡನಲ್ಲಿ ಮರಳು ಸಾಗಿಸುವ ಲಾರಿಗಳಿಂದ ರಸ್ತೆ ಹಾಳಾಗುತ್ತಿರುವುದನ್ನು ಪ್ರಶ್ನಿಸಿದ ಗ್ರಾಮಸ್ಥರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ನಡೆದಿದೆ.

ಮರಳು ಸಾಗಾಟದಿಂದ ತಮ್ಮ ಊರಿನ ರಸ್ತೆ ಹಾಳಾಗುತ್ತದೆ ಎಂದು ಹೇಳಿದ ಕಿರಣ ಶ್ರೀಧರ ನಾಯ್ಕ ಮತ್ತು ಮಾಬ್ಲೇಶ್ವರ ಶ್ರೀಧರ ನಾಯ್ಕ ಎನ್ನುವವರ ಮೇಲೆ ಮರಳು ಸಾಗಾಟ ನಡೆಸಿರುವ ಗ್ರಾಮ ಪಂಚಾಯತ್ ಸದಸ್ಯ ಗಜಾನನ ಗೌಡ, ಗಣೇಶ ಗೌಡ, ಹನ್ಮಂತ ಗೌಡ, ಕಿರಣ ಗೌಡ ಎಂಬುವವರು ಹಿಂಬದಿಯಿಂದ ಬಂದು ಕಬ್ಬಿಣದ ರಾಡ್‍ನಿಂದ ತಲೆಗೆ, ಕೈ ಹಾಗೂ ದೇಹದ ಅಂಗಾಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಗಾಯಾಳುಗಳು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News