ಮಂಡ್ಯ: ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಕಣ್ಣು ದಾನ
ಮಂಡ್ಯ, ಜೂ.7: ಕುಟುಂಬದವರ ಆಶಯದಂತೆ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಎರಡು ನೇತ್ರಗಳನ್ನು ಮಂಡ್ಯ ಯೂತ್ ಗ್ರೂಪ್‍ನ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಸಂಸ್ಥೆ ಗುರುವಾರ ಸಂಗ್ರಹಿಸಿದೆ.
ಇಲ್ಲಿನ ಗಾಂಧಿನಗರ ನಿವಾಸಿ ಕೆ.ಶಿವಣ್ಣ(70) ಹೃದಯಾಘಾತದಿಂದ ಗುರುವಾರ ಬೆಳಗ್ಗೆ ಮೃತಪಟ್ಟಿದರು. ನಂತರ ಮೃತ ಶಿವಣ್ಣರ ಮಕ್ಕಳಾದ ಚೇತನ್ ಹಾಗೂ ಗುರುಪ್ರಸಾದ್ ನೇತ್ರ ಸಂಗ್ರಹಿಸಲು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಅವರಿಗೆ ಮನವಿ ಮಾಡಿದರು.
ಕುಟುಂಬದವರ ಆಶಯದಂತೆ ಡಾ.ಯಾಶಿಕಾ ಅನಿಲ್ ನೇತೃತ್ವದ ತಂಡ ಮೃತ ಶಿವಣ್ಣ ಅವರ ನಿವಾಸಕ್ಕೆ ತೆರಳಿ ನೇತ್ರ ಸಂಗ್ರಹಿಸಿದರು. ತಕ್ಷಣವೇ ನೇತ್ರಗಳನ್ನು ಸುರಕ್ಷಿತವಾಗಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ಕಳುಹಿಸಲಾಯಿತು. ಕೆಲವೇ ಗಂಟೆಗಳಲ್ಲಿ ಆ ನೇತ್ರಗಳು ಇಬ್ಬರು ಅಂಧರ ಬಾಳಿಗೆ ಬೆಳಕಾದವು. ಇದರೊಂದಿಗೆ ಮಂಡ್ಯ ಯೂತ್ ಗ್ರೂಪ್ ಸಂಗ್ರಹಿಸಿದ ನೇತ್ರಗಳ ಸಂಖ್ಯೆ 36ಕ್ಕೆ ಏರಿದೆ. ನೇತ್ರದಾನ ಮಾಡುವವರು 9844442400 ಸಂಪರ್ಕಿಸಲು ಡಾ.ಅನಿಲ್ ಆನಂದ್ ಮನವಿ ಮಾಡಿದ್ದಾರೆ.