ಮಂಡ್ಯ: ಕಾಲ ಚಿತ್ರ ಬಿಡುಗಡೆ ವಿರುದ್ಧ ಪ್ರತಿಭಟನೆ
Update: 2018-06-07 23:14 IST
ಮಂಡ್ಯ, ಜೂ.7: ಕಾವೇರಿ ವಿಚಾರದಲ್ಲಿ ರಜನಿಕಾಂತ್ ಕರ್ನಾಟಕ ರಾಜ್ಯ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿ, 'ಕಾಲ' ಚಿತ್ರ ಬಿಡುಗಡೆ ವಿರೋಧಿಸಿ ಕದಂಬ ಸೈನ್ಯ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಸಂಜಯ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರಜನಿಕಾಂತ್ ಮತ್ತು ರಜನಿಕಾಂತ್‍ರ ಕಾಲ ಚಿತ್ರ ಬಿಡುಗಡೆ ಬೆಂಬಲಿತ ಹೇಳಿಕೆ ನೀಡಿರುವ ನಟ ಪ್ರಕಾಶ್ ರೈ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಮಿತಿ ಸದಸ್ಯ ಉಮ್ಮಡಹಳ್ಳಿ ನಾಗೇಶ್, ಎಸ್.ಶಿವಕುಮಾರ್, ಭಗವಾನ್, ಎಸ್.ಚಂದ್ರಶೇಖರ್, ದಾಮೋಜಿರಾವ್, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.