ಮೆದುಳು ಗಡ್ಡೆ ರೋಗದ ಬಗ್ಗೆ ಅರಿವು ಅಗತ್ಯ: ನರರೋಗ ತಜ್ಞ ಡಾ.ಅನಿಲ್ ಕುಮಾರ್
ಕ್ಕಮಗಳೂರು, ಜೂ.8: ಭಾರತದಲ್ಲಿ ಪ್ರತೀ ವರ್ಷ ಐದು ಸಾವಿರ ಜನರ ಪೈಕಿ ಒಬ್ಬರಿಗೆ ಮೆದುಳಿನ ಗಡ್ಡೆಯ ತೊಂದರೆ ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಮೆದುಳಿನ ಗಡ್ಡೆಗಳು ಮಾರಣಾಂತಿಕವಲ್ಲ. ಈ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಕಡಿಮೆ ಇದೆ ಎಂದು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ನ ನರರೋಗ ತಜ್ಞ ಡಾ.ಅನಿಲ್ ಕುಮಾರ್ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆದುಳಿನ ಗಡ್ಡೆಯಿಂದ ತೀವ್ರ ತಲೆನೋವು, ದೀರ್ಘ ಕಾಲದ ತಲೆನೋವು, ಮೂರ್ಛೆರೋಗ, ತಲೆ ಸುತ್ತುವಿಕೆ, ದೃಷ್ಟಿದೋಷ, ಕಿವಿ ಕೇಳಿಸದಿರುವುದು, ಮಾನಸಿಕ ನಡವಳಿಕೆಯಲ್ಲಿ ಬದಲಾವಣೆ, ದುರ್ಬಲತೆ ಮತ್ತು ಶಕ್ತಿಹೀನತೆ ಲಕ್ಷಣಗಳು ಕಂಡು ಬರಲಿವೆ ಎಂದ ಅವರು, ಮೆದುಳು ಗಡ್ಡೆಯಲ್ಲಿ ಸೌಮ್ಯ ಗಡ್ಡೆಗಳು, ಮಾರಕ ಗಡ್ಡೆಗಳು, ಪ್ರಾಥರ್ಮಿಕ ಗಡ್ಡೆಗಳು ಎಂದು ಮೂರು ವಿಧ ಹೊಂದಿರುತ್ತದೆ. ಸೌಮ್ಯ ಗಡ್ಡೆಗಳು ವೇಗವಾಗಿ ಬೆಳೆಯುವುದಿಲ್ಲ ಹಾಗೂ ಹರಡುವುದಿಲ್ಲ. ಮಾರಕ ಗಡ್ಡೆಗಳು ಅತೀ ವೇಗವಾಗಿ ಬೆಳೆಯುತ್ತವೆ ಹಾಗೂ ಮಾರಣಾಂತಿಕವಾಗಿರುತ್ತವೆ ಎಂದರು.
ರಕ್ತ ಪರೀಕ್ಷೆ, ಹಾಮೋನ್ ಪರೀಕ್ಷೆ, ಸಿ.ಟಿ. ಎಂ.ಆರ್.ಐ ಸ್ಕ್ಯಾನ್, ಪತ್ತೆ ಹಚ್ಚಬಹುದಾಗಿದೆ ಎಂದ ಅವರು, ಮೆದಳು ಗಡ್ಡೆಗಳು ವಯಸ್ಕರಲ್ಲಿ ಮತ್ತು ಅನುವಂಶಿಕವಾಗಿ ಬರುವ ಸಾಧ್ಯತೆ ಇದೆ ಎಂದ ಅವರು, ಮೆದಳು ಗಡ್ಡೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದೆ. ಆಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್, ಬ್ರೈನ್ ಸರ್ಜರಿಗೆ ಓ.ಟಿ.ರೂಂ, ನುರಿತ ತಜ್ಞ ವೈದ್ಯರು, ಎಂ.ಆರ್.ಐ ಸ್ಕ್ಯಾನ್ ಸೌಲಭ್ಯವಿದ್ದು, ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ನ ಮಾರ್ಕೇಟಿಂಗ್ ಮಾನೇಜರ್ ಶೈಲೇಶ್ ಇದ್ದರು.