×
Ad

ದಾವಣಗೆರೆ: ಜಿಲ್ಲೆಯಲ್ಲಿ ಶೇ. 91.59 ಮತದಾನ

Update: 2018-06-08 20:23 IST

ದಾವಣಗೆರೆ,ಜೂ.08: ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರರ ಕ್ಷೇತ್ರ ಮತ್ತು ಈಶಾನ್ಯ ಪದವೀಧರರ ಕ್ಷೇತ್ರಗಳಿಗೆ ಒಟ್ಟು ಶೇ. 91.59 ಮತದಾನವಾಗಿದೆ.

ಚುನಾವಣೆಯ ಮತದಾನದ ವಿವರ ಇಂತಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ. 91.59 ಮತದಾನವಾಗಿದೆ. ಕ್ಷೇತ್ರದಲ್ಲಿ ಒಟ್ಟು 6 ಮತಗಟ್ಟೆಗಳಿದ್ದು 2054 ಪುರುಷ, 835 ಮಹಿಳೆ ಸೇರಿದಂತೆ 2889 ಮತದಾರರ ಪೈಕಿ 1902 ಪುರುಷ, 744 ಮಹಿಳೆ ಸೇರಿದಂತೆ 2646 ಮತದಾರರು ಮತದಾನ ಮಾಡಿದ್ದಾರೆ.

ಈಶಾನ್ಯ ಪದವೀಧರರ ಕ್ಷೇತ್ರ: ಈ  ಕ್ಷೇತ್ರದಲ್ಲಿ ಶೇ. 77.56 ಮತದಾನವಾಗಿದೆ. ಒಟ್ಟು 974 ಪುರುಷ, 278 ಮಹಿಳೆ ಸೇರಿದಂತೆ 1252 ಮತದಾರರ ಪೈಕಿ 758 ಪುರುಷ, 213 ಮಹಿಳೆ ಸೇರಿದಂತೆ 971 ಮತದಾರರು ಮತದಾನ ಮಾಡಿದ್ದಾರೆ.

ನೈರುತ್ಯ ಪದವೀಧರರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ 68.62 ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 2698 ಪುರುಷ, 1158 ಮಹಿಳೆ ಸೇರಿದಂತೆ 6071 ಮತದಾರರಿದ್ದು ಈ ಪೈಕಿ 3082 ಪುರುಷ, 1084 ಮಹಿಳೆ ಸೇರಿದಂತೆ 4166 ಮತದಾರರು ಮತದಾನ ಮಾಡಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ: ಈ ಕ್ಷೇತ್ರದಲ್ಲಿ ಶೇ. 84 ಮತದಾನವಾಗಿದೆ. 818 ಪುರುಷ, 207 ಮಹಿಳಾ ಮತದಾರರು ಸೇರಿದಂತೆ ಒಟ್ಟು 1025 ಮತದಾರರ ಪೈಕಿ 695 ಪುರುಷ ಮತ್ತು 166 ಮಹಿಳಾ ಮತದಾರರು ಸೇರಿದಂತೆ 861 ಮತದಾರರು ಮತ ಚಲಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News