ಹನೂರು: ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ

Update: 2018-06-08 16:57 GMT

ಹನೂರು,ಜೂ.05: ಉದ್ಯೋಗ ಖಾತ್ರಿ ಯೋಜನೆ ಮುಖಾಂತರ ಸಮಾಜದಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕರೆದುಕೊಂಡು ಹೋಗಲು ಒಂದು ಸೂಕ್ತ ಮಾರ್ಗ ಸೂಚಿಯಾಗಿದೆ ಎಂದು ಪಿಡಿಒ ರಾಜೇಶ್ ತಿಳಿಸಿದರು 

ತಾಲೂಕಿನ ಕುರುಟ್ಟಿಹೂಸರು ಗ್ರಾಮ ಪಂಚಾಯತ್ 2017-2018 ಸಾಲಿನ  ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋದನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯ ಮುಖಾಂತರ ಪ್ರತಿಯೊಬ್ಬ ವ್ಯಕ್ತಿಗೂ ಸಹ ಜೀವನಕ್ಕೆ ಅತ್ಯಂತ ಅವಶ್ಯಕವಾದಂತಹ ಸವಲತ್ತುಗಳನ್ನು ಕೊಳ್ಳಲು ಜೀವನದಲ್ಲಿ ಒಂದು ಆದಾಯ ಮುಖ್ಯ. ಆ ಒಂದು ಆದಾಯ ಮೂಲಕ್ಕೆ ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆ ಮುಖಾಂತರ ಸರ್ಕಾರ ಉದ್ಯೋಗಗಳನ್ನು ಕಲ್ಪಿಸಿದ್ದು, ಈ ದಿಸೆಯಲ್ಲಿ ಕಳೆದ ಏಪ್ರಿಲ್‍ನಿಂದ ಒಬ್ಬ ವ್ಯಕ್ತಿಗೆ ಒಂದು ದಿನದ ಕೂಲಿಗೆ ಈ ವರ್ಷದಿಂದ 249 ರೂಗಳನ್ನು ಮಾಡಿದ್ದು, ಗ್ರಾಮಸ್ಥರು ತಾವೇ ಮುಂದೇ ಬಂದು ಪಂಚಾಯತ್ ನಲ್ಲಿ ಉದ್ಯೋಗ ಕೇಳಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಾಮಾಜಿಕ ಕಾಮಗಾರಿಗಳನ್ನು ಮಾಡಿಕೂಂಡು ಈ ಮಹತ್ತರವಾದ ಯೋಜನೆಯನ್ನು ಯಶಸ್ವಿಗೊಳಿಸಿ ಎಂದು ಹೇಳಿದರು 

ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ಮುನಿಸಿದ್ದ, ಸದಸ್ಯ ರವಿ ದಂಟಳ್ಳಿ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ , ನೂಡಲ್ ಅಧಿಕಾರಿ ಮನೋಹರ್ , ರೈತ ಮುಖಂಡ ಕೃಷ್ಣ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News