ಲಿಂಗದಹಳ್ಳಿ: ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ

Update: 2018-06-08 17:43 GMT

ಲಿಂಗದಹಳ್ಳಿ, ಜೂ.8: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಮೂಲಕ ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ ರವೀಂದ್ರಕುಮಾರ್ ಕರೆ ನೀಡಿದರು.

ಲಿಂಗದಹಳ್ಳಿಯ ಅಮೃತ್ ಮಹಲ್ ತಳಿಸಂವರ್ಧನ ಉಪಕೇಂದ್ರದಲ್ಲಿ ಪಶು ಇಲಾಖೆ ಹಾಗೂ ಅರಣ್ಯ ಇಲಾಖೆ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿದ್ಯಾವಂತರೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಅವುಗಳನ್ನು ಸುಡುತ್ತಿರುವುದು ಪರಿಸರಕ್ಕೆ ಆಪಾಯಕಾರಿಯಾಗಿದೆ. ಆದ್ದರಿಂದ ಜೀವಿಗಳಿಗೆ ಆಮ್ಲಜನಕ, ಮಳೆ ನೀಡುವ ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಉತ್ತಮ ಪರಿಸರ ನಿರ್ಮಾಣ ಸಾಧ್ಯವಿದೆ, ಗುಡ್ಡಗಾಡುಗಳಲ್ಲಿ ನೀರು ಹಿಂಗಿಸಿದರೆ ಅಂರ್ತಜಲ ವೃದ್ದಿಯಾಗುತ್ತದೆ. ಕಾಡುಗಳನ್ನು ಕಡಿಯುವುದರಿಂದ ಹಾಗೂ ಕಾಡಿಗೆ ಬೆಂಕಿ ಬೀಳುವುದರಿಂದ ಪರಿಸರ ನಾಶದ ಜೊತೆಗೆ ಅಂರ್ತಜಲ ಕಡಿಮೆಯಾಗಲು ಕಾರಣವಾಗುತ್ತದೆ. ಇದರಿಂದ ಜೀವ ರಾಶಿಗಳ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅವರು ಹೇಳಿದವರು.  

ಡಾ.ಎಸ್.ಬಿ ಉಮೇಶ್ ಮಾತನಾಡಿ, ಅಮೃತ ಮಹಲ್ ಕಾವಲಿನಲ್ಲಿ ಮೇವಿನ ಮರಗಳನ್ನು ಬೆಳೆಸಲು ಕ್ರಮ ಕೈಗೊಂಡಿದ್ದು, ಪ್ರತಿವರ್ಷ 500 ಮೇವಿನ ಸಸಿಗಳನ್ನು ಹಂತ ಹಂತವಾಗಿ ನೆಟ್ಟು ಬೆಳೆಸಲು ಕಾರ್ಯ ರೂಪಿಸಲಾಗಿದೆ. ಇದ್ದರಿಂದ ಪರಿಸರ ರಕ್ಷಣೆ ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಲಯಾ ಅರಣ್ಯಾಧಿಕಾರಿ ಚರಣ್‍ಕುಮಾರ್, ಡಾ. ಪ್ರಭಾಕರ್, ಡಾ.ಬಸವರಾಜ್,  ಪ್ರಕಾಶ್ ಮೂರ್ತಿ, ಪ್ರಾಣೆಶ್, ಸಂಕ್ಯಾನಾಯ್ಕ, ಕಂದ್ಯಾನಾಯ್ಕ, ಪ್ರಕಾಶ್ ಮತ್ತು ದೇವರಾಜ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News