ಮಹಿಳಾ ಪ್ರೊಫೆಸರ್ ಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ: ಬಿಜೆಪಿ ಐಟಿ ಸೆಲ್ ಸದಸ್ಯನ ಬಂಧನ

Update: 2018-06-09 09:33 GMT

ತ್ರಿಶ್ಶೂರ್, ಜೂ.9: ಲೇಖಕಿ ಹಾಗೂ ಸಹಾಯಕ ಪ್ರೊಫೆಸರ್ ದೀಪಾ ನಿಶಾಂತ್ ಅವರಿಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಬಿಜು ನಾಯರ್ ಬಿಜೆಪಿಯ ಐಟಿ ಸೆಲ್ ಸದಸ್ಯನಾಗಿದ್ದಾನೆ. ತಿರುವನಂತಪುರಂನಲ್ಲಿದ್ದ ಆತನನ್ನು ತ್ರಿಶ್ಶೂರಿಗೆ ಬರ ಹೇಳಿದ ಪೊಲೀಸರು ನಂತರ ಬಂಧಿಸಿದ್ದಾರೆ.

ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಶಂಕರನಾರಾಯಣನ್ ಎಂಬವರ ಫೇಸ್ ಬುಕ್ ಪೋಸ್ಟ್ ಒಂದನ್ನು ದೀಪಾ ಶೇರ್ ಮಾಡಿದ್ದು ಒಂದು ಗುಂಪಿನ ಜನರಿಗೆ ಪಥ್ಯವಾಗಿರಲಿಲ್ಲ. ಇದಕ್ಕೆ ಪ್ರತೀಕಾರವಾಗಿ ದೀಪಾರ ಫೋನ್ ನಂಬರ್ ಅನ್ನು ಅವರು ಅಶ್ಲೀಲ ವೆಬ್ ಸೈಟ್ ಗಳಲ್ಲಿ ಪೋಸ್ಟ್ ಮಾಡಿದ್ದರಲ್ಲದೆ ಆಕೆಯ ಬಗ್ಗೆ ಅಸಭ್ಯ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದನೆನ್ನಲಾಗಿದೆ. ಈ ಬಗ್ಗೆ ದೀಪಾ ಪೊಲೀಸ್ ದೂರು ನೀಡಿದ್ದರು.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿದ್ದು, ಶುಕ್ರವಾರ ಬಂಧಿತನಾದ ಬಿಜು ಅದೇ ದಿನ ಜಾಮೀನು ಪಡೆದು ಹೊರಬಂದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News