×
Ad

ಸಿದ್ದರಾಮಯ್ಯ ಮನಸ್ಸು ಮಾಡಿದರೆ ಸರಕಾರವೇ ಇರುವುದಿಲ್ಲ: ಕಾಂಗ್ರೆಸ್ ಶಾಸಕ

Update: 2018-06-09 19:35 IST

ಬೀದರ್, ಜೂ. 9: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಎರಡೇ ನಿಮಿಷದಲ್ಲಿ ಸರಕಾರ ಇರುವುದಿಲ್ಲ ಎಂದು ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಯಾರು ಅಗೌರವ ತೋರುತ್ತಾರೆ, ಯಾರು ಅವರನ್ನು ಕಡೆಗಣನೆ ಮಾಡುತ್ತಾರೆ, ಅವರು ಪಕ್ಷದಿಂದಲೇ ಹೋಗುತ್ತಾರೆ. ಸಿದ್ದರಾಮಯ್ಯರ ಕೂದಲಿಗೂ ಧಕ್ಕೆ ತರಲು ನಾವು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರನ್ನು ಯಾರೂ ಮೂಲೆಗುಂಪು ಮಾಡಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅಂತಹ ಕೆಲಸ ಯಾರೂ ಮಾಡಲು ಆಗಲ್ಲ. ನಾವು ಅಂತಹ ನೀಚ ಕೆಲಸ ಮಾಡುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News