ಅಮೆರಿಕ ಸಂಸ್ಥೆಯಿಂದ ವಿಚಾರಣೆ ಎದುರಿಸಲಿರುವ ಐಸಿಐಸಿಐ ಬ್ಯಾಂಕ್, ಚಂದಾ ಕೊಚ್ಚಾರ್

Update: 2018-06-10 16:25 GMT

ಹೊಸದಿಲ್ಲಿ, ಜೂ. 10: ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚಾರ್ ಹಾಗೂ ಅವರ ಕುಟುಂಬ ಭಾಗಿಯಾಗಿರುವ ಪ್ರಕರಣದ ಬಗ್ಗೆ ಬಹು-ಸಂಸ್ಥೆಗಳ ತನಿಖೆ ಭಾರತದಲ್ಲಿ ಮುಂದುವರಿದಿದೆ. ಅಲ್ಲದೆ, ಈ ಪ್ರಕರಣ ಅಮೆರಿಕದ ಮಾರುಕಟ್ಟೆ ನಿಯಂತ್ರಕ ಎಸ್‌ಇಸಿಯಿಂದಲೂ ಪರಿಶೀಲನೆಗೆ ಒಳಪಡುತ್ತಿದೆ.

ಇದರ ಜೊತೆಗೆ ಭಾರತದ ನಿಯಂತ್ರಕ ಹಾಗೂ ತನಿಖಾ ಸಂಸ್ಥೆಗಳು ತನಿಖೆಯ ಭಾಗವಾಗಿ ಮಾರಿಶಸ್ ಸೇರಿದಂತೆ ವಿದೇಶಗಳ ತಮ್ಮ ಸಹುದ್ಯೋಗಿಗಳ ನೆರವು ಕೋರಿದೆ. ಐಸಿಐಸಿಐ ಬ್ಯಾಂಕ್ ಹಾಗೂ ಕೊಚ್ಚಾರ್‌ಗೆ ಸಂಬಂಧಿಸಿದ ಪ್ರಕರಣದ ತನಿಖೆ ಬಗ್ಗೆ ಪ್ರಶ್ನಿಸಿದಾಗ ಸಾರ್ವಜನಿಕ ವ್ಯವಹಾರಗಳ ಎಸ್‌ಇಸಿ ಕಚೇರಿಯ ವಕ್ತಾರ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಕಳುಹಿಸಿದ ಪ್ರಶ್ನೆಗೆ ಕೂಡ ಐಸಿಐಸಿಐ ಬ್ಯಾಂಕ್ ಉತ್ತರಿಸಿಲ್ಲ. ಆದರೆ, ಅದು ಈಗಾಗಲೇ ಕೊಚ್ಚಾರ ಮೇಲಿರುವ ಆರೋಪಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News