ಫುಟ್ಬಾಲ್ ಜ್ವರ..!
Update: 2018-06-10 23:36 IST
ವಿಶ್ವಕಪ್ ಫುಟ್ಬಾಲ್‌ಗೆ ದಿನಗಣನೆ ಆರಂಭವಾಗಿದ್ದು, ಭಾರತದಲ್ಲೂ ಹಿರಿಯ ಕಿರಿಯರೆನ್ನದೆ ಫುಟ್ಬಾಲ್ ಜ್ವರ ಹಬ್ಬುತ್ತಿದೆ. ಅಸ್ಸಾಂನ ಬಾಸ್ಕ ಗ್ರಾಮದ ಹೊಲದಲ್ಲಿ ರವಿವಾರ ಗ್ರಾಮೀಣ ಮಹಿಳೆಯರು ಕಾಲ್ಚೆಂಡಾಟ ಆಡಿ ಸಂಭ್ರಮಿಸುತ್ತಿರುವುದು. ಇನ್ನೊಂದೆಡೆ ಕೋಲ್ಕತಾದ ಲಿಯೊನೆಲ್ ಮೆಸ್ಸಿ ಅಭಿಮಾನಿ ಶಿಬ್ ಶಂಕರ್ ತನ್ನ ಮೂರು ಮಹಡಿಯ ಕಟ್ಟಡಕ್ಕೆ ಅರ್ಜೆಂಟೀನ ತಂಡ ಧರಿಸುವ ಜೆರ್ಸಿಯ ಬಣ್ಣ ಬಳಿದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಬಾಬ್‌ಗಂಜ್ ಟೌನ್‌ಶಿಪ್‌ನಲ್ಲಿ ಟೀ ಹಾಗೂ ಸ್ನಾಕ್ಸ್ ಸ್ಟಾಲ್ ಮಾಲಕನಾಗಿರುವ ಪಾತ್ರ ತನ್ನ ಮನೆಯ ನೆಲಮಹಡಿಯಲ್ಲಿರುವ ಟೀ ಸ್ಟಾಲ್‌ನ ಮಾರ್ಗದುದ್ದಕ್ಕೂ ಅರ್ಜೆಂಟೀನದ ಧ್ವಜಗಳ ತೋರಣ ಕಟ್ಟಿದ್ದಾರೆ.