×
Ad

ಚಿಕ್ಕಮಗಳೂರು: ವಿಶ್ವವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಹಿಂದುರುಗಿಸಲು ತೀರ್ಮಾನ

Update: 2018-06-11 17:41 IST

ಚಿಕ್ಕಮಗಳೂರು, ಜೂ.11: ಶಾಲಾ ಅಡಳಿತ ಮಂಡಳಿ ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿಯ ಶೀತಲ ಸಮರದಿಂದಾಗಿ ಶತಮಾನದ ಹೊಸ್ತಿಲಲ್ಲಿದ್ದ ನಗರದ ವಿಶ್ವವಿದ್ಯಾಲಯ ಶಾಲೆಯ ಮುಸುಕಿನ ಗುದ್ದಾಟ ಬೀದಿರಂಪವಾದ ಬೆನ್ನಲ್ಲೆ ಸೋಮವಾರ ಈ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಶಿಕ್ಷಣ ಇಲಾಖೆಯ ಉಪನಿರ್ರ್ದೆಶಕರ ನೇತೃತ್ವದಲ್ಲಿ ನಡೆದ  ವಿಶೇಷ ವಾರ್ಷಿಕ ಸರ್ವ ಸದಸ್ಯರ ಸಭೆ  ನಡೆಯಿತು.

ವಿಶ್ವವಿದ್ಯಾನಿಲಯ ಶಾಲೆಯ ಆಡಳಿತ ಮಂಡಳಿ ಶಾಲೆ ಮುಚ್ಚಲು ಹುನ್ನಾರ ನಡೆಸುತ್ತಿದೆ. ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸಭೆಯಲ್ಲಿ ತುರ್ತಾಗಿ  ಶಾಲಾ ಮಕ್ಕಳ ನೋಂದಣಿಗೆ ಅರ್ಜಿ ಕರೆಯುವುದು ಕರೆಯುವುದು ಹಾಗೂ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಶುಲ್ಕವನ್ನು ಕೂಡಲೇ ವಾಪಸ್ ಪಾವತಿಸಲು ತೀರ್ಮಾನ ಕೈಗೊಳ್ಳಲಾಯಿತು. 

ಪ್ರೇಮ್ ಕುಮಾರ್ ಮಾತನಾಡಿ, ಯಾರ ಮೇಲು ಆರೋಪ ಮಾಡಿ ಅಧಿಕಾರ ಕಿತ್ತುಕೊಳ್ಳುವ ದುರುದ್ದೇಶದಿಂದ ಪೋಷಕರು ಬಂದಿಲ್ಲ, ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ಶಾಲೆಯಲ್ಲಿ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ  ಮೂಲಭೂತ ಸೌಲಭ್ಯಗಳನ್ನು ನೀಡಬೇಕು.  ನೂರು ವರ್ಷ ಹೊಸ್ತಿಲಲ್ಲಿರುವ ಶಾಲೆ ಉಳಿಸಿ ಬೆಳೆಸುವ ಉದ್ದೇಶ ಪೋಷಕರು ಹೊಂದಿದ್ದಾರೆ. ಆಡಳಿತ ಮಂಡಳಿ ಸರಿಯಾದ ರೀತಿಯಲ್ಲಿ ಶಾಲೆ ನಡೆಸುತ್ತಿಲ್ಲ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಹೊಸ ಆಡಳಿತ ಮಂಡಳಿ ನೇಮಕ ಮಾಡಿ, ಆಡಳಿತ ಮಂಡಳಿಯಲ್ಲಿ ಹಳೆ ವಿದ್ಯಾರ್ಥಿಗಳು, ಈ ಭಾಗದ ನಗರಸಭೆ ಸದಸ್ಯರು, ಶಿಕ್ಷಕರು, ಪೋಷಕರನ್ನು ಒಳಗೊಂಡ ನೂತನ ಆಡಳಿತ ಮಂಡಳಿ ರಚಿಸುವಂತೆ ಸಭೆಯಲ್ಲಿ ಒತ್ತಾಯಿಸಿದರು. 

ವಿಶ್ವವಿದ್ಯಾಲಯ ಶಾಲೆಯ ಅಧ್ಯಕ್ಷ ರಂಗನಾಥ್ ಮಾತನಾಡಿ, 8 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದೇನೆ. ನೂರು ವರ್ಷದ ಹೊಸ್ತಿಲಲ್ಲಿರುವ ಶಾಲೆ ಅಭಿವೃದ್ಧಿ ಪಡಿಸಿ ಬಡ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ. ಈ ಹಿಂದೆ ಅನೇಕ ಸಂಘ ಸಂಸ್ಥೆಯಲ್ಲಿ 35ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಶಾಲೆಯನ್ನು ಮುಚ್ಚುವ ಯಾವ ದುರುದ್ದೇಶವು ಇಲ್ಲ, ಕೆಲ ಶಿಕ್ಷಕರ ಕುತಂತ್ರದಿಂದ ಶಾಲೆ ವಿರುದ್ಧ ಹಾಗೂ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಸಮಜಾಯಿಸಿ ನೀಡಿದರು. 

ಜಯ ಕರ್ನಾಟಕ ಸಂಘಟನೆಯ ಅನಿಲ್ ಕುಮಾರ್ ಮಾತನಾಡಿ, ಶಾಲೆ ಆಡಳಿತ ಮಂಡಳಿಯಲ್ಲಿ 400ಕ್ಕೂ ಹೆಚ್ಚು ಜನರು ಸದಸ್ಯರನ್ನು ಹೊಂದಿದ್ದರು.  ಕೆಲವೇ ಮಂದಿ ಆಡಳಿತ ಮಂಡಳಿಯಲ್ಲಿದ್ದಾರೆ. ಅವರಿಗೆ ಬೇಕಾದವರನ್ನು ಸೇರಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನು ವಿಸರ್ಜಿಸಿ ನೂತನ ಆಡಳಿತ ಮಂಡಳಿ ನೇಮಿಸಬೇಕು. ಇದರ ಜೊತೆಗೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. 

ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಪೋಷಕರು ಸಭೆಯಲ್ಲಿ ಭಾಗವಹಿಸಿ, ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದರು. ಶಾಲೆಯ ಮುಖ್ಯಶಿಕ್ಷಕರಿಗೆ ಯಾವುದೇ ಅಧಿಕಾರ ನೀಡದೆ. ಆಡಳಿತ ಮಂಡಳಿಯವರೇ ಅಧಿಕಾರ ಚಲಾಯಿಸುತ್ತಿದ್ದಾರೆ. ಶಿಕ್ಷಕರಿಗೆ ಅವಾಚ್ಯ ಶದ್ದಗಳಿಂದ ನಿಂಧಿಸಲಾಗುತ್ತಿದೆ. ಶಾಲೆಗೆ ಬೀಗದ ಕೀಗಳನ್ನು ಆಡಳಿತ ಮಂಡಳಿಯ ವಶದಲ್ಲಿದೆ. ಮಕ್ಕಳ ವರ್ಗಾವಣೆ ಪತ್ರ ನೀಡಲು ಸಾವಿರ ರು. ಹಣ ಪಡೆದುಕೊಳ್ಳುತ್ತಿದ್ದಾರೆ. ಪೋಷಕರ ಸಭೆ ನಡೆಸದೆ ಶಾಲಾ ಶುಲ್ಕ ಹೆಚ್ಚಿಸಿದ ಕಾರಣ ಸುಮಾರು 115 ವಿದ್ಯಾರ್ಥಿಗಳು ಜ್ಯೂನಿಯರ್ ಕಾಲೇಜ್‍ಗೆ ಸೇರ್ಪಡೆಗೊಂಡಿದ್ದಾರೆ. ಶುಲ್ಕ ಹೆಚ್ಚಿಸಿ ಶಾಲಾ ಫಲಿತಾಂಶದ ನೆಪವೊಡ್ಡಿ ಶಾಲೆ ಮುಚ್ಚುವ ಹುನ್ನಾರ ಆಡಳಿತ ಮಂಡಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ್ ಮಾತನಾಡಿ, 22ದಿನಗಳಲ್ಲಿ ಸರ್ವ ಸದಸ್ಯರ ಸಭೆ ಕರೆದು ಬೈಲಾ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು. ವಿದ್ಯಾರ್ಥಿಗಳಿಂದ ಪಡೆದಿರುವ ಹೆಚ್ಚುವರಿ ಶುಲ್ಕವನ್ನು ವಪಾಸ್ ಕೊಡಿಸಲಾಗುವುದು. ಸರ್ವ ಸದಸ್ಯರ ಸಭೆಯ ನಂತರ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. 

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಜಸಿಂತಾ ಅನಿಲ್‍ಕುಮಾರ್, ಕ್ಷೇತ್ರಶಿಕ್ಷಣಾಧಿಕಾರಿ ವೆಂಕಟರಾಮ್, ಸಂಸ್ಥೆಯ ಕಾರ್ಯಧ್ಯಕ್ಷ ನಾರಾಯಣ, ಭವನಿ ಶಂಕರ್, ಶಾಲಾ ಮುಖ್ಯೋಪಾದ್ಯಯ ಆರ್.ಪಿ. ಶ್ರೀನಿವಾಸ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಶಿಕ್ಷಕರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News