×
Ad

ಮಹಿಳೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ವಿರೋಧ ಸಲ್ಲ: ಜಯಮಾಲಾ

Update: 2018-06-11 18:14 IST

ಬೆಂಗಳೂರು, ಜೂ. 11: ವಿಧಾನ ಪರಿಷತ್ ಸದಸ್ಯೆಯಾದ ನನಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ಅಪಸ್ವರ ಎದ್ದಿರುವುದು ಸರಿಯಲ್ಲ ಎಂದು ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಆಕ್ಷೇಪಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳೆಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ವಿರೋಧ ವ್ಯಕ್ತಪಡಿಸಬಾರದು. ಸಚಿವ ಸ್ಥಾನ ಕೇಳುವುದು ಶಾಸಕರ ಹಕ್ಕು. ಅದನ್ನು ಕೇಳಲಿ. ಆದರೆ ಅವರ ಬೇಡಿಕೆಗಳನ್ನು ಹೈಕಮಾಂಡ್ ಬಳಿ ಇಡಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News