ಮಡಿಕೇರಿ; ಕಾರು ಢಿಕ್ಕಿಯಾಗಿ 2 ಹಸುಗಳ ಸಾವು
Update: 2018-06-11 18:48 IST
ಮಡಿಕೇರಿ,ಜೂ.11: ಕಾರು ಢಿಕ್ಕಿಯಾಗಿ ಎರಡು ಹಸುಗಳು ಸಾವಿಗೀಡಾಗಿರುವ ಘಟನೆ ತಿತಿಮತಿ ಬಳಿ ನಡೆದಿದೆ.
ತಿತಿಮತಿ ಬಳಿಯ ಮಜ್ಜಿಗೆ ಹಳ್ಳ ಫಾರಂ ನಿವಾಸಿ ಮಹೇಶ್ ಎಂಬವರ ಜಾನುವಾರುಗಳನ್ನು ಜೋಗಿ ಎಂಬವರು ಆನೆಚೌಕೂರು ಗೇಟಿಗೆ ಹೋಗುವ ರಸ್ತೆಯಲ್ಲಿ ಮೇಯಿಸಿಕೊಂಡಿದ್ದರೆನ್ನಲಾಗಿದ್ದು, ಗ್ಲೆನ್ ಸೋಮಣ್ಣ ಅವರು ಚಾಲಿಸುತ್ತಿದ್ದ ಕಾರು ಢಿಕ್ಕಿಯಾಗಿ ಎರಡು ಹಸುಗಳು ಸ್ಥಳದಲ್ಲೇ ಸಾವಿಗೀಡಾಗಿವೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.