ಆಲ್ದೂರು; ರಸ್ತೆ ಮೇಲುರುಳಿದ ಮರ : ಎರಡು ಮನೆಗಳು ಜಖಂ

Update: 2018-06-11 15:07 GMT

ಆಲ್ದೂರು, ಜೂ.11: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಸಂಜೆ ತಾಲೂಕಿನ ಆಲ್ದೂರು ಸಮೀಪದ ಮೈಲಿಮನೆ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಆಲ್ದೂರು-ಚಿಕ್ಕಮಗಳೂರು ವಾಹನ ಸಂಚಾರ ಕೆಲ ಹೊತ್ತು ಅಡಚಣೆ ಉಂಟಾಗಿದ್ದು, ಎರಡು ಮನೆಗಳು ಜಖಂಗೊಂಡಿವೆ.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಿಮನೆ ಗ್ರಾದಲ್ಲಿ ಘಟನೆ ನಡೆದಿದ್ದು, ಮರ ಉರುಳಿದ ಪರಿಣಾಮ ರಸ್ತೆ ಪಕ್ಕದ ಎರಡು ಕೂಲಿ ಕಾರ್ಮಿಕರ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಮನೆಯಲ್ಲಿ ಯಾರೂ ಇಲ್ಲದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಮರ ರಸ್ತೆಗೆ ಉರುಳಿದ ಪರಿಣಾಮ ಸುಮಾರು 3 ಗಂಟೆಗೂ ಹೆಚ್ಚು ಕಾಲ ಆಲ್ದೂರು ಮೈಲಿ ಮನೆ ಸಂಪರ್ಕ ರಸ್ತೆಯಲ್ಲಿ ಸಂಚಾರ ಸಾಧ್ಯವಾಗಿರಲಿಲ್ಲ. ನಂತರ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಿರುಸಿನ ಕಾರ್ಯಾವರಣೆ ನಡೆಸಿ ರಸ್ತೆಯಲ್ಲಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News