×
Ad

'ಮಾನ್ಸೂನ್ ಟೂರಿಸಂ' ಆಕರ್ಷಣೆ : ಕೊಡಗಿನ ಜಲಪಾತಗಳಲ್ಲಿ ಪ್ರವಾಸಿಗರದ್ದೇ ಹವಾ

Update: 2018-06-11 22:31 IST

ಮಡಿಕೇರಿ, ಜೂ.11 :ಕೊಡಗು ಜಿಲ್ಲೆಯಲ್ಲಿ ಮುಂಗಾರಿನ ವರ್ಷಾಧಾರೆಗೆ ಜಲಧಾರೆಗಳು ಜೀವ ತುಂಬಿಕೊಳ್ಳುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿ ಸಮೀಪದ ಅಬ್ಬಿ ಜಲಪಾತ ರುದ್ರ ರಮಣೀಯವಾಗಿ ಧುಮ್ಮಿಕ್ಕುತ್ತಿದ್ದು, ಸಾವಿರಾರು ಪ್ರವಾಸಿಗರು ಸುರಿಯುವ ಮಳೆಯ ನಡುವೆಯೇ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ 'ಮಾನ್ಸೂನ್ ಟೂರಿಸಂ' ಪರಿಕಲ್ಪನೆ ಯಶಸ್ವಿಯಾಗಿದ್ದು, ಮಳೆಗಾಲದಲ್ಲಿ ಜಲಪಾತಗಳ ಸೊಬಗನ್ನು ವೀಕ್ಷಿಸುವುದಕ್ಕಾಗಿಯೇ ಲಕ್ಷಾಂತರ ಪ್ರವಾಸಿಗರು ಜಿಲ್ಲೆಗೆ ಹರಿದು ಬರುತ್ತಿದ್ದಾರೆ.

ಈ ಮಳೆಗಾಲದ ಆರಂಭದಲ್ಲೇ ಕೊಡಗಿನ ಪ್ರವಾಸಿ ತಾಣಗಳು ದೇಶ ವಿದೇಶಗಳ ಪ್ರವಾಸಿಗರಿಂದ ತುಂಬಿ ಹೋಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News