×
Ad

ಚಾರ್ಮಾಡಿಘಾಟ್ ನಲ್ಲಿ ಏಕಮುಖ ಸಂಚಾರ ಆರಂಭ

Update: 2018-06-12 14:41 IST

ಚಿಕ್ಕಮಗಳೂರು, ಜೂ.12: ಸತತ ಮಳೆಯಿಂದಾಗಿ ಹಲವಡೆ ಗುಡ್ಡ ಕುಸಿತ ಉಂಟಾಗಿ, ಸ್ಥಗಿತಗೊಂಡಿದ್ದ  ವಾಹನಗಳ ಸಂಚಾರ  ಚಾರ್ಮಾಡಿಯಲ್ಲಿ ಮತ್ತೆ ಆರಂಭಗೊಂಡಿದ್ದು,  ರಸ್ತೆಯಲ್ಲಿ ಬಿದ್ದಿರುವ ಮಣ್ಣುಗಳನ್ನು ತೆರವುಗೊಳಿಸಲಾಗುತ್ತಿದ್ದು,  ವಾಹನಗಳ  ಏಕಮುಖ ಸಂಚಾರ ಆರಂಭಗೊಂಡಿದೆ

ಚಾರ್ಮಾಡಿ ಘಾಟ್‌ನಲ್ಲಿ ಸೋಮವಾರ ರಾತ್ರಿಯಿಂದ ಗುಡ್ಡ ಕುಸಿತ ಆರಂಭಗೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇದೀಗ ಜೆಸಿಬಿ ಮತ್ತು ಹಿಟಾಚಿಗಳ ಮೂಲಕ ಮಾರ್ಗದಲ್ಲಿ ವಾಹನಗಳ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ. 

 ಒಟ್ಟು 9 ಕಡೆ ಗುಡ್ಡ ಕುಸಿದಿತ್ತು. ಗುಡ್ಡ  ಕುಸಿತದಿಂದ ಹಾಸನ ಮಾರ್ಗದ ರೈಲು ಸಂಚಾರ‌ ಸೋಮವಾರದಿಂದ ಸ್ಥಗಿತಗೊಂಡಿತ್ತು,  ಬಳಿಕ ರಸ್ತೆ ಸಂಚಾರವೂ ಸ್ಥಗಿತಗೊಂಡಿತ್ತು. ಮಂಗಳವಾರ ರಾತ್ರಿಯಿಂದ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News