ಹನೂರು: ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ
ಹನೂರು,ಜೂ.12: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗಲಿದ್ದು . ಗ್ರಾಮದ ಜನತೆಗೆ ವರ್ಷದಲ್ಲಿ 100 ದಿನ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗಿದು ವರದಾನವಾಗಿದೆ ಎಂದು ಶೆಟ್ಟಳ್ಳಿ ಪಿಡಿಒ ರಾಜೇಶ್ ತಿಳಿಸಿದರು
ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯತ್ 2017-2018ಸಾಲಿನ ಮೊದಲನೇ ಹಂತದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತರಿ ಯೋಜನೆ ದುಡಿಯುವ ಕೈಗಳಿಗೆ ಉದ್ಯೋಗ ಒದಗಿಸಲು ಜಾರಿಗೆ ಬಂದಿದ್ದು, ಈ ಯೋಜನೆ ಸಮಾಜದಲ್ಲಿ ಅತ್ಯಂತ ಕೆಳ ಮಟ್ಟದಲ್ಲಿರುವ ಬಡವರನ್ನು ಅಭಿವೃದ್ದಿಯತ್ತ ಕರೆದು ಕೊಂಡು ಹೋಗಲು ಒಂದು ಸೂಕ್ತ ಮಾರ್ಗ ಸೂಚಿಯಾಗಿದೆ. ಈ ದಿಸೆಯಲ್ಲಿ ಕಳೆದ ಏಪ್ರಿಲ್‍ನಿಂದ ಒಬ್ಬ ವ್ಯಕ್ತಿಗೆ ಒಂದು ದಿನದ ಕೂಲಿಯಾಗಿ 249 ರೂಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಗ್ರಾಮಸ್ಥರು ತಾವೇ ಮುಂದೇ ಬಂದು ಪಂಚಾಯತ್ ನಲ್ಲಿ ಉದ್ಯೋಗ ಕೇಳಿ ವೈಯಕ್ತಿಕ ಕಾಮಗಾರಿಗಳ ಜೊತೆಗೆ ಸಾಮಾಜಿಕ ಕಾಮಗಾರಿಗಳನ್ನು ಮಾಡಿಕೊಂಡು ಈ ಮಹತ್ತರವಾದ ಯೋಜನೆಯನ್ನು ಯಶಸ್ವಿಗೂಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ಶಾಂತಮೂರ್ತಿ, ಉಪಾದ್ಯಕ್ಷೆ ಮಹದೇವಮ್ಮ, ತಾಲ್ಲೂಕು ಲೆಕ್ಕ ಸಂಯೋಜಕ ಮನೋಹರ್, ನೂಡಲ್ ಅಧಿಕಾರಿಯಾದ ಸಿಆರ್‍ಪಿ ರಾಜೇಶ್ ಇನ್ನಿತರರು ಹಾಜರಿದ್ದರು.