×
Ad

ದಾವಣಗೆರೆ: ಪತಿಯ ಕಿರಿಕಿರಿಯಿಂದ ಬೇಸತ್ತ ಮಹಿಳೆ ಆತ್ಮಹತ್ಯೆ

Update: 2018-06-12 23:27 IST

ದಾವಣಗೆರೆ,ಜೂ.12: ಪತಿಯ ಕಿರಿಕಿರಿಯಿಂದ ಬೇಸತ್ತ ಮಹಿಳೆಯೊಬ್ಬರು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹಿಲ್ಸ್ ನಿಂದ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ.

ನಗರದ ಡಾಂಗೆಪಾರ್ಕ್ ಬಳಿಯ ಶಿಕ್ಷಕಿ ಮಂಜುಳಾ ಅವರ ಪುತ್ರಿ ಸ್ಮಿತಾ (26) ಮೃತಪಟ್ಟ ಗೃಹಿಣಿ. ಈಕೆಯನ್ನು ತಾಲೂಕಿನ ಹದಡಿ ಗ್ರಾಮದ ಯುವಕನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಪತಿಯ ಕಿರಿಕಿರಿ ಹಾಗೂ ಉದಾಸೀನತೆಯಿಂದ ಬೇಸತ್ತು ತೀವ್ರ ಮನನೊಂದಿದ್ದಳು ಎನ್ನಲಾಗಿದ್ದು, ಈ ಕುರಿತು ಇತ್ತೀಚೆಗೆ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ರಾಜೀ ಸಂಧಾನ ಕೂಡಾ ಮಾಡಲಾಗಿತ್ತು. ಆದರೂ, ಪತಿಯ ನಡವಳಿಕೆ ಆಕೆಗೆ ಬೇಸರ ತರಿಸಿದ್ದರಿಂದ ಮನನೊಂದು ನಂದಿ ಹಿಲ್ಸ್ ನಿಂದ ಹಾರಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಕುರಿತು ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News