×
Ad

ಮಂಡ್ಯ: ವೃದ್ಧೆಯ ಸರ ಕಸಿದು ಪರಾರಿ

Update: 2018-06-12 23:55 IST

ಮಂಡ್ಯ, ಜೂ.12: ಬೈಕ್‍ನಲ್ಲಿ ಬಂದ ಇಬ್ಬರು ವಾಯುವಿಹಾರಕ್ಕೆ ತೆರಳಿದ್ದ ವೃದ್ದೆಯೊಬ್ಬರಿಂದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ನಗರದ ಕಲ್ಲಹಳ್ಳಿ ಎಪಿಎಂಸಿ ಬಳಿ ಸೋಮವಾರ ಸಂಜೆ ನಡೆದಿದೆ.

ಮಹಾಲಕ್ಷ್ಮಿ ಎಂಬುವವರು ಸರ ಕಳೆದುಕೊಂಡವರು. ಬ್ಲಾಕ್ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಈ ಕೃತ್ಯವೆಸಗಿದ್ದಾರೆನ್ನಲಾಗಿದ್ದು, ಈ ಸಂಬಂಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News