ಬೋಜೇಗೌಡರ ಆಯ್ಕೆ ಜನಪರ ನಿಲುವಿಗೆ ಸಿಕ್ಕ ಗೆಲುವು: ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್
ಮೂಡಿಗೆರೆ, ಜೂ.13: ನೈರುತ್ಯ ಶಿಕ್ಷಕ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬೋಜೇಗೌಡ ಅವರು ಜಯಗಳಿಸಿರುವುದು ಅವರ ಜನಪರ ನಿಲುವು ಹಾಗೂ ವರ್ಚಸ್ಸಿನ ನಾಯಕತ್ವಕ್ಕೆ ಸಿಕ್ಕ ಗೆಲುವಾಗಿದೆ ಎಂದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ತಿಳಿಸಿದರು.
ಯಾವುದೇ ಕ್ಷೇತ್ರದಲ್ಲಿ ಧಕ್ಷತೆ, ಪ್ರಾಮಾಣಿಕ ಮತ್ತು ನಿಷ್ಠೆಯಿದ್ದರೆ ಮಾತ್ರ ಪ್ರಜಾಪ್ರಭುತ್ವ ಯಸ್ವಿಯಾಗುತ್ತದೆ. ಬೋಜೇಗೌಡ ಅವರು ಬಿಜೆಪಿಯ ಗಣೇಶ್ ಕಾರ್ಣಿಕ್ ಅವರನ್ನು ಮಣಿಸಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಜೆಡಿಎಸ್‍ಗೆ ಚೈತನ್ಯ ಶಕ್ತಿ ತುಂಬಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದರು.
ಗೆಲುವಿಗೆ ಕಾರಣಕರ್ತರಾದ ನೈರುತ್ಯ ಶಿಕ್ಷಕ ಕ್ಷೇತ್ರದ ಮತದಾರನ್ನು ಅಭಿನಂದಿಸುತ್ತೇವೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಬಲವರ್ಧನೆಗೊಳ್ಳಲಿದೆ. ಜೆಡಿಎಸ್‍ನ ಜನೋಪಯೋಗಿ ಕಾರ್ಯಕ್ರಮಗಳಿಂದ ಮತಗಳು ಪರಿವರ್ತಯಾಗುತ್ತಿವೆ. ರೈತರಿಗೆ, ಮಹಿಳೆಯರಿಗೆ, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.