×
Ad

ಹಾಸನ: ಸೌಹಾರ್ದ ಇಫ್ತಾರ್ ಕೂಟ

Update: 2018-06-13 17:58 IST

ಹಾಸನ,ಜೂ.13: ರಂಜಾನ್ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಸೌಹಾರ್ದ ಇಪ್ತಾರ್ ಕೂಟದಲ್ಲಿ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಮತ್ತು ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್ ಭಾಗವಹಿಸಿ ಶುಭ ಹಾರೈಸಿದರು.

ನಗರದ ಅರಳೇಪೇಟೆ ಬೀದಿಯಲ್ಲಿರುವ ಎಂ.ಎಚ್. ಕನ್‍ವೆನ್ಷನ್ ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಇಫ್ತಾರ್ ಕೂಟದಲ್ಲಿ ನೂರಾರು ಜನ ಪಾಲ್ಗೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಎಸ್. ಪ್ರಕಾಶ್, ಕಳೆದ ಹಲವಾರು ವರ್ಷಗಳಿಂದ ರಂಜಾನ್ ಹಬ್ಬದ ಸಮಯದಲ್ಲಿ ಇಂತಹ ಇಫ್ತಾರ್ ಕೂಟವನ್ನು ಏರ್ಪಡಿಸಲಾಗುತ್ತದೆ. ಶ್ರದ್ಧೆ, ಭಕ್ತಿಯಿಂದ ಆಚರಿಸುವ ಈ ಹಬ್ಬದಲ್ಲಿ ಬೆಳಗಿನಿಂದ ಉಪವಾಸ ಇದ್ದು, ನಿಗದಿತ ಸಮಯದಲ್ಲಿ ಊಟ ಸೇವಿಸುತ್ತಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷರಾದ ಹೆಚ್.ಎಸ್. ಅನೀಲ್ ಕುಮಾರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜೆಡಿಎಸ್ ವತಿಯಿಂದ ಇಂತಹ ಇಫ್ತಾರ್ ಕೂಟ ಏರ್ಪಡಿಸಲಾಗಿದೆ ಎಂದ ಅವರು, ಎಲ್ಲಾ ಮುಸ್ಲಿಂ ಬಾಂಧವರಿಗೂ ರಂಜಾನ್ ಹಬ್ಬದ ಶುಭ ಹಾರೈಸಿದರು.

ಈ ವೇಳೆ ನಗರಸಭೆ ಮಾಜಿ ಉಪಾಧ್ಯಕ್ಷರಾದ ಇರ್ಷಾದ್ ಪಾಷಾ, ಇಜಾಜ್ ಪಾಷಾ, ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಜಿ.ಓ. ಮಹಾಂತಪ್ಪ, ಎಪಿಎಂಸಿ ಮತ್ತು ಹೆಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಜಯರಾಮ್ ಇತರರು ಪಾಲ್ಗೊಂಡಿದ್ದರು.
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News